ಬಂಟ್ವಾಳ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ವಯಸ್ಸಿನ ಯುವತಿಯೋರ್ವಳು ತನ್ನ ಪ್ರಿಯಕರನೊಂದಿಗೆ ಠಾಣೆಗೆ ಹಾಜರಾಗಿದ್ದಾಳೆ. ಪಾಣೆಮಂಗಳೂರು ಬಳಿ ನಿವಾಸಿ ನಝ್ಮಾ (16) ತನ್ನ ಪ್ರಿಯಕರ ರಾಮಲ್ಕಟ್ಟೆಯ ಇಮ್ರಾನ್ ಎಂಬಾತನೊಂದಿಗೆ ಪತ್ತೆಯಾದ ಯುವತಿಯಾಗಿದ್ದಾಳೆ. ಅವಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ತನ್ನ ತಾಯಿಯೊಂದಿಗೆ ತೆರಳುವುದಾಗಿ ತಿಳಿಸಿದ ಹಿನ್ನಲೆಯಲ್ಲಿ ಆಕೆಯನ್ನು ತಾಯಿಯೊಂದಿಗೆ ಕಳುಹಿಸಿ ಕೊಡಲಾಗಿದೆ.
ಎ.2ರಂದು ನಝ್ಮಾ, ಇಮ್ರಾನ್ ಜೊತೆ ನಾಪತ್ತೆಯಾಗಿದ್ದಳು. ಅಪ್ರಾಪ್ತ ವಯಸ್ಸಿನವಳಾದ ಕಾರಣ ಆಕೆಯ ತಾಯಿ ಮೈಮುನ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡಿರುವುದನ್ನು ಕಂಡು ಖುದ್ದು ಅವರೇ ಠಾಣೆಗೆ ಹಾಜರಾರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇಮ್ರಾನ್ ಜೊತೆ ತಾನೇ ಹೋಗಿರುವುದಾಗಿ ಆಕೆ ಒಪ್ಪಿಕೊಂಡಿರುವುದರಿಂದ ಮುಚ್ಚಳಿಕೆ ಬರೆಯಿಸಿ ಯುವಕನನ್ನು ಬಿಡುಗಡೆ ಮಾಡಲಾಗಿದೆ.

By suddi9

Leave a Reply

Your email address will not be published. Required fields are marked *