ಬಜಪೆ:   ಆಧುನಿಕ ಯುಗದಲ್ಲಿ ಮಹಿಳೆಯರು ಪುರುಷರಿಗೆ ಸರಿ ಸಮವಾಗಿದ್ದಾಳೆ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಕೈಯಾಡಿಸಿದರು, ಮಹಿಳೆಯ ಮೇಲಿನ ದೌರ್ಜನ್ಯ ಕಡಿಮೆಯಾಗಿಲ್ಲ ಎಂದು ಆಕಾಶವಾಣಿ ಕಾರ್ಯಕ್ರಮ ನಿರೂಪಕಿ ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ ಹೇಳಿದರು.
ಕಂಬಳಬೆಟ್ಟು-ತೋಕೂರು ಶ್ರೀ ದೇವಿ ಮಹಿಳಾ ಮಂಡಲ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು , ಲಯನ್ಸ್ ಕ್ಲಬ್ ಮೂಲ್ಕಿ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ನಡೆದ ಪೊಂಜೊವುಲೆನ ತುಡರ ಪರ್ಬ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

DSC07210
ಆಶಾ ಹರೀಶ್ ಅಮೀನ್ ಮುಲ್ಕಿ ಕಾರ್ಯಕ್ರಮ ಉದ್ಘಾಟಿಸಿದರು. ಎಂ. ಆರ್. ಪಿ. ಎಲ್ ಡ್ಯೆಪುಟಿ ಜನರಲ್ ಮ್ಯಾನೇಜರ್ ಲಕ್ಷ್ಮೀಕುಮಾರನ್ ಅಧ್ಯಕ್ಷತೆ ವಹಿಸಿದ್ದರು.
ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ಪುರಂದರ ಡಿ. ಶೆಟ್ಟಿಗಾರ್, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ರಘು ಇಡ್ಕಿದು ಅತ್ತಾವರ,  ಫ್ರೊ. ಡಿ. ವೇದಾವತಿ, ಮಂಡಲದ ಅಧ್ಯಕ್ಷೆ ವಿಲಾಸಿನಿ ಮೆಂಡನ್ ಶಶಿಕಲಾ ಪ್ರೇಮಲತಾ ವಿದ್ಯಾಲಕ್ಷ್ಮೀ, ಪಿ. ಎಸ್. ಪೂರ್ಣಿಮಾ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *