ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮತ್ತೆ ಮತ್ತೆ ಚಿನ್ನ ವಶಪಡಿಸುತ್ತಲೇ ಇದ್ದು ನಿನ್ನೆ ಮತ್ತೆ ಯಾನಿಯೊಬ್ಬ ಗುದನಾಳದಲ್ಲಿ ಅಡಗಿಸಿದ್ದ ಚಿನ್ನದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.airport ದುಬೈಯಿಂದ ಮಂಗಳೂರಿಗೆ ಬಂದಿಳಿದ ಜೆಟ್ ಏರ್‍ವೇಯ್ಸ್ ಎಂಬ ವಿಮಾನದಲ್ಲಿ ಬರುತ್ತಿದ್ದ ಮಹಾರಾಷ್ಟ್ರದ ಥಾನೆ ಎಂಬಲ್ಲಿನ ಉಲ್ಹಾಸ್ ನಗರದ ದೀಪಕ್ ನಚಲ್ ದಾಸ್ ಬಂಧಿತ ಆರೋಪಿ. ಈತನಿಂದ 12,35,640 ರೂ. ಮೌಲ್ಯದ 472.52 ಗ್ರಾಂ ಮೌಲ್ಯದ ಒಟ್ಟು ನಾಲ್ಕು ಆಯತಾಕಾರದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

By suddi9

Leave a Reply

Your email address will not be published. Required fields are marked *