ಕಿನ್ನಿಗೋಳಿ: ಗುರುವಾರ ಬೆಳಿಗ್ಗೆ ನಳಿನ್ಕುಮಾರ್ ತನ್ನ ಹುಟ್ಟೂರು ಕಟೀಲು ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದ ಅರ್ಚಕರಾದ ಲಕ್ಷ್ಮೀ ನಾರಾಯಣ ಆಸ್ರಣ್ಣ ಹಾಗೂ ಅನಂತ ಪದ್ಮನಾಭ ಆಸ್ರಣ್ಣರ ಆಶೀವರ್ಾದ ಪಡೆದರು. ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಹಾಜರಿದ್ದರು.

Kateel 03

Kateel 01

Kateel 02
ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ನಳಿನ್ಕುಮಾರ್ ಕಳೆದ ಐದು ವರ್ಷದ ಸಾಧನೆ ಮತ್ತು ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇದೇ ಆಧಾರದಲ್ಲಿ ಎರಡನೆ ಬಾರಿ ಬಿಜೆಪಿ ಅಭ್ಯಥರ್ಿಯಾಗಿ ಜನರ ಬಳಿಗೆ ತೆರಳಿ ಮತಯಾಚನೆ ನಡೆಸುತ್ತೇನೆ, ರಾಜ್ಯದಲ್ಲಿ ಅನುದಾನ ಬಳಸುವಲ್ಲಿ ಮೊದಲಿಗನಾಗಿದ್ದರೂ ನನಗೆ ಪ್ರಚಾರ ಮುಖ್ಯವಲ್ಲ ಪ್ರಚಾರಕ್ಕಾಗಿ ಬಯಸದೆ ಸರಕಾರದ ಅನುದಾನವನ್ನು ಪ್ರಾಮಾಣಿಕವಾಗಿ ವಿನಿಯೋಗಿಸಿದ್ದ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದರು.
ಬಾಹ್ಯ ಶಕ್ತಿಗಳ ಅಪಪ್ರಚಾರಕ್ಕೆ ಬೆಲೆಕೊಡುವುದಿಲ್ಲ ಸೌಹಾರ್ದ ಸ್ಪಧರ್ೆಗೆ ನನ್ನ ಆದ್ಯತೆ, ರಾಷ್ಟ್ರದ ಬಗ್ಗೆ ಪ್ರತಿಯೊಬ್ಬರ ಮತದಾರನು ಸಹ ಚಿಂತನೆ ನಡೆಸಿಯೇ ಚುನಾಯಿಸುವುದರಿಂದ ಇಂತಹ ಅಪಪ್ರಚಾರಗಳಿಗೆ ಜನರು ಕಿವಿಗೊಡುವುದಿಲ್ಲ, ಬಿಜೆಪಿ ಕಾರ್ಯಕರ್ತರ ಶ್ರಮ, ರಾಜ್ಯ, ರಾಷ್ಟ್ರನಾಯಕರ ವಿಶ್ವಾಸ, ಜನರ ಆಶೋತ್ತರಗಳಿಗೆ ಸ್ಪಂದನೆ ನೀಡುವುದು ನನ್ನ ಆದ್ಯತೆ ಇದೇ ಗೆಲುವಿನ ಶ್ರೀ ರಕ್ಷೆಯೂ ಆಗಲಿದೆ ಎಂದು ಹೇಳಿದರು.
ಜನರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಇಚ್ಚೆಯಿಂದ ಸರಳವಾಗಿ ನಾಮಪತ್ರವನ್ನು ಸಲ್ಲಿಸುತ್ತಿದ್ದೇನೆ. ಎಲ್ಲಾ ಕ್ಷೇತ್ರದಲ್ಲೂ ಇಂದು ಕಾರ್ಯಕರ್ತರು ತಮ್ಮ ಧಾಮರ್ಿಕ ಕ್ಷೇತ್ರಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ಮಾಡಿದ್ದಾರೆ. ಪ್ರಜಾಪ್ರಭುತ್ವದ ದೇಶದಲ್ಲಿ ಪ್ರತಿಯೊಬ್ಬನಿಗೆ ಸ್ಪಧರ್ಿಸುವ ಹಕ್ಕು ಇರುವುದರಿಂದ ಆಮ್ ಆದ್ಮಿ ಹಾಗೂ ಪಕ್ಷೇತರರ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸ್ಥಳೀಯ ಬಿಜೆಪಿ ನಾಯಕರಾದ ಈಶ್ವರ ಕಟೀಲು, ಕೊಡೆತ್ತೂರು ಭುವನಾಭಿರಾಮ ಉಡುಪ, ಭಾಸ್ಕರ ದೇವಸ್ಯ, ಜಗನ್ನಾಥ ಶೆಟ್ಟಿ, ದೇವಪ್ರಸಾದ ಪುನರೂರು, ಆದರ್ಶ ಶೆಟ್ಟಿ ಎಕ್ಕಾರು, ಜನಾರ್ದನ ಕಿಲೆಂಜೂರು, ದೇವಿಪ್ರಸಾದ ಶೆಟ್ಟಿ, ಕಸ್ತೂರಿ ಪಂಜ, ಬೇಬಿಸುಂದರ ಕೋಟ್ಯಾನ್, ಸರೋಜಿನಿ, ಶೈಲಾ ಶೆಟ್ಟಿ, ಗುರುರಾಜ್ ಕಟೀಲು, ಕೇಶವ ಕಕರ್ೇರಾ, ಅರುಣ್ಕುಮಾರ್, ಭಾಸ್ಕರ ಪೂಜಾರಿ, ಭುಜಂಗ ಶೆಟ್ಟಿ ಎಕ್ಕಾರು, ಮತ್ತಿತರರು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *