ಸುದ್ದಿ9 ಕೈಕಂಬ: ನೀಲಕಂಠ ಉಮಾಮಹೇಶ್ವರ ದೇವಸ್ಥಾನ ದೈವಂಗಳ ಗುಡ್ಡೆ ಅದ್ಯಪಾಡಿ ಇಲ್ಲಿ ಮಾ.30ರಿಂದ ಎಪ್ರಿಲ್ 4ರವರೆಗೆ ಬ್ರಹ್ಮಕಲಾಶಾಭಿಷೇಕ ನಡೆಯಲಿದೆ ಎಂದು ಬಂಟವರ ಯಾನೆ ನಾಡವರ ಮಾತೃಸಂಘ ಮಂಗಳೂರು ಇದರ ಗೌರವಾಧ್ಯಕ್ಷ ಅಜಿತ್ ಕುಮಾರ್ ರೂ. ಮಾಲಾಡಿ ತಿಳಿಸಿದ್ದಾರೆ. ಅವರು ದೇವಳದ ಆವರಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾಡುತ್ತಿದ್ದರು.

6

7

neelakanta umamaheshvara temple daivangalgudde adyapady
neelakanta umamaheshvara temple daivangalgudde adyapady

4

umamaheshvara temple daivangalagudde bajpe
umamaheshvara temple   daivangalagudde bajpe

ಈ ದೇವಸ್ಥಾನ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿ ಅನ್ನ ಛತ್ರ, ಅತಿಥಿಗ್ರಹ, ನಾಗಬನ ನವೀಕರಣ ಇತ್ಯಾದಿ ಜೀಣರ್ೋದ್ದಾರ ಕಾರ್ಯ ನಡೆಯುತ್ತಿದೆ. ಇದರಂತೆ ಎಪ್ರಿಲ್ ಮೂರರ ಗುರುವಾರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗು ಎಪ್ರಿಲ್ 4ರಂದು ಸಹಸ್ರ ನಾರಿಕೇಳ ಮಹಾಗಣಪತಿ ಯಾಗ ನಡೆಯಲಿದೆ. ಕಾರ್ಯಕ್ರಮದಂದು ಪ್ರತೀದಿನ ಅನ್ನಸಂತರ್ಪಣೆ ನಡೆಯಲಿದೆ. ಅಲ್ಲದೆ ಅನೇಕ ಮಂದಿ ಗಣ್ಯರ ಉಪಸ್ಥಿತಿಯಲ್ಲಿ ಧಾಮರ್ಿಕ ಸಭೆ ನಡೆಯಲಿದ್ದು ಧಾಮರ್ಿಕ, ರಾಜಕೀಯ ಹಾಗೂ ಧಾಮರ್ಿಕ ಮುಖಂಡರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕೆಲವೊಂದು ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ದೇವಳದ ಬಳಿ ಕಲ್ಯಾಣ ಮಂಟಪವನ್ನು ನಿಮರ್ಿಸಲಾಗಿದ್ದು, ಅದನ್ನು ಮದುವೆ ಹಾಗೂ ಇನ್ನಿತರ ಶುಭ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡಲಾಗುವುದು ಎಂದು ಮಾಲಾಡಿ ತಿಳಿಸಿದರು.
ದೇವಸ್ಥಾನದ ಆಡಳಿತ ಮೊಕೇಸರರಾದ ಮಂಜುನಾಥ ಭಂಡಾರಿ ಶೆಡ್ಡೆ ಪ್ರಾಸ್ತಾವಿಕವಾಗಿ ಮಾತಾಡಿ ಅದ್ಯಪಾಡಿ ಕ್ಷೇತ್ರ ಮೂರು ಗ್ರಾಮಗಳನ್ನೊಳಗೊಂಡಿದ್ದು ಹನ್ನೆರಡು ಕ್ಷೇತ್ರಗಳ ಧಾಮರ್ಿಕ ಸಂಬಂಧವನ್ನು ಹೊಂದಿದೆ. ಆದಿಶಕ್ತಿ, ಹರಿಹರಬ್ರಹ್ಮ, ನಾಗಬ್ರಹ್ಮ ಹೀಗೆ ಹಲವಾರು ದೇವ-ದೇವಿಯರ ಶಕ್ತಿಕೇಂದ್ರವಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅರ್ಚಕರಾದ ಕೃಷ್ಣಭಟ್, ಭುಜಂಗ ಶೆಟ್ಟಿ, ರಮಾನಾಥ ಶೆಟ್ಟಿ, ಚಂದ್ರಹಾಸ ಶೆಟ್ಟಿ ರಂಗೋಲಿ ಬಿ.ಸಿ.ರೋಡು, ಕೃಷ್ಣಮೂತರ್ಿ, ಮುರಳೀಧರ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *