ಸುದ್ದಿ9 ಕೈಕಂಬ: ಸಾಮಾಜಿಕ ಸೇವೆಯಲ್ಲಿ ಯುವ ಸಂಘ ಸಂಸ್ಥೆಗಳು ತೊಡಗಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ ಇಂತಹ ಯುವಕ ಸಂಘಗಳು ಗ್ರಾಮ ಮಟ್ಟದಲ್ಲಿ ಹಲವಾರು ಸೇವೆಗಳನ್ನು ಮಾಡಿ ದೇಶಕ್ಕೆ ಮಾದರಿಯಾಗಬೇಕು ಎಂದು ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹೇಳಿದರು.
ಅವರು ಶನಿವಾರ ಪೊಳಲಿ ರಾಜಶ್ರೀ ಯುವಕ ಮಂಡಲದ 35ನೇ ವರ್ಷದ ವಾರ್ಷಿಕೋತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾದರಿ ಸಮಾಜ ಸೇವಕಿ ಸೀತಮ್ಮ ಅವರಿಗೆ ಮಾದರಿ ಮಹಿಳಾ ಪ್ರಶಸ್ತಿ ಪುರಸ್ಕಾರ, ಮೆಸ್ಕಾಂಇಲಾಖೆಯ ಲೈನ್ಮ್ಯಾನ್ ಕುಮಾರ ಶ್ರಮಜೀವಿ ಪ್ರಶಸ್ತಿ ಪುರಸ್ಕಾರ,ರವಿಶಂಕರ ನೂಯಿ ಸಮಾಜ ಪ್ರಶಸ್ತಿ, ಅಬುಬಕ್ಕರ್ ಅಮ್ಮುಂಜೆ ಅವರಿಗೆ ಸಾಮರಸ್ಯ ಪ್ರಶಸ್ತಿನೀಡಿ ಗೌರವಿಸಿದರು.

ಜ್ಞಾನ ವೃದ್ಧಿಯ ಆಕಾಕ್ಷೆನಿಲ್ಲಬಾರದು, ಜ್ಷಾನವು ನಮ್ಮ ಕತ್ತಲೆಯ ದೀಪವಿದ್ದಂತೆ. ಯೋದರು ನಮ್ಮ ದೇಶ ರಕ್ಷಣೆಗಾಗಿ ಪಣತೊಟ್ಟು ಗಡಿ ಕಾವಲು ನಡೆಸುತ್ತಿದ್ದಾರೆ ದೇಶಕ್ಕಾಗಿ ನಾವೇನು ಮಾಡಬಹುದು ಎಂಬ ಚಿಂತನೆ ಎಲ್ಲರಲ್ಲೂ ಇರಬೇಕು ಎಂದು ಸಾಮರಸ್ಯ ಪುರಸ್ಕಾರ ಪ್ರಶಸ್ತಿ ಸ್ವೀಕರಿಸಿದ ಅಬುಬಕ್ಕರ್ ಹೇಳಿದರು.
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಅರ್ಚಕ ನಾರಾಯಣ ಭಟ್ ದೀಪ ಬೆಳಗಿಸಿ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಉಧ್ಯಮಿಗಳಾದ ರಘು ಎಲ್ ಶೆಟ್ಟಿ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ಪೊಳಲಿ ವೆಂಕಟೇಶ್ ನಾವುಡ, ರಾಜಶ್ರೀ ಯುವಕ ಸಂಘದ ಅಧ್ಯಕ್ಷ ಪ್ರಶಾಂತ್ ಉಪಸ್ಥಿತರಿದ್ದರು. ಮೋಹನ್ ಬಿಲ್ವಪತ್ರೆ ಸ್ವಾಗತಿಸಿ , ಕೇಶವ ಪೊಳಲಿ ವರದಿ ವಾಚಿಸಿ ಧನ್ಯವಾದವಿತ್ತರು. ವಾದಿರಾಜ ಕಲ್ಲೂರಾಯ ನಿರೂಪಿಸಿದರು.
“ಸನ್ಮಾನ- ಪುರಸ್ಕಾರ”
ಶ್ರಮ ಜೀವಿ ಪ್ರಶಸ್ತಿ ಪುರಸ್ಕೃತರು ಕುಮಾರ ಮೆಸ್ಕಾಂ ಲೈನ್ಮ್ಯಾನ್, ಮಾದರಿ ಮಹಳಾ ಪುರಸ್ಕೃತರು ಸೀತಮ್ಮ ಗಾಣದಬೆಟ್ಟು ಪೊಳಲಿ, ಸಾಮರಸ್ಯ ಪ್ರಶಸ್ತಿ ಪುರಸ್ಕೃತರು ಅಬುಬಕ್ಕರ್ ಅಮ್ಮುಂಜೆ, ಸಮಾಜ ಪ್ರಶಸ್ತಿ ಪುರಸ್ಕೃತರು. ರವಿಶಂಕರ್ ರಾವ್ ನೂಯಿ.






