ಕೈಕಂಬ : ಸಹಕಾರಿ ಕ್ಷೇತ್ರದ ಪೊಳಲಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಸಂಪತ್ ಕುಮಾರ್ ಶೆಟ್ಟಿ ಅಮ್ಮುಂಜೆ ಗುತ್ತು ಅವರು ಮುಂದಿನ ಐದು ವರ್ಷ ಅವಧಿಗೆ ಆಯ್ಕೆಯಾಗಿದ್ದು ಈ ಮೂಲಕ ಅವರು ಸತತ 2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದಂತಾಗಿದೆ. ಉಪಾಧ್ಯಕ್ಷರಾಗಿ ವೆಂಕಟೇಶ್ ನಾವುಡ ಪೊಳಲಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಸೋಮವಾರ ಬ್ಯಾಂಕ್ ನ ಸಭಾಂಗಣದಲ್ಲಿ ಜರಗಿದ ಚುನಾಚಣಾ ಪ್ರಕ್ರಿಯೆಯಲ್ಲಿ ಅವರು ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ಅವರ ಉಪಸ್ಥಿತಿಯಲ್ಲಿ ನೂತನ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ನಾವುಡ ಪೊಳಲಿ ಅವರು ಅವಿರೋಧವಾಗಿ ಆಯ್ಕೆಯಾದರು. ನಿರ್ದೆಶಕರಾಗಿ ದೇವದಾಸ್ ಹೆಗ್ಡೆ ಅಮ್ಮುಂಜೆ ಗುತ್ತು, ಕರುಣಾಕರ ಆಳ್ವ ಅಮ್ಮುಂಜೆ, ಬಡಕಬೈಲ್ ಗೋಪಾಲ್ ಅಂಚನ್, ಯಶವಂತ ಪೂಜಾರಿ ಪೊಳಲಿ, ಅಬುಬಕ್ಕರ್ ಅಮ್ಮುಂಜೆ, ನಿರಂಜನಿ ಸಿ.ಶೆಟ್ಟಿ ಬಡಕಬೈಲ್ , ಜಯಂತಿ ಬೆಂಜನ್ಪದವು , ಲಿಂಗಪ್ಪ ಮುಖಾರಿ ಚುಣಾವಣೆಯಲ್ಲಿ ಸ್ಪರ್ದ್ಧಿಸಿ ಆಯ್ಕೆಯಾಗಿ ಪೊಳಲಿ ವ್ಯವಸಾಯ ಸೇವಾ ಸಹಕಾರಿಯ ನಿರ್ದೇಶಕರಾಗಿದ್ದಾರೆ.
