ಬಜಪೆ: ಶ್ರೀ ಕ್ಷೇತ್ರ ಮುಚ್ಚೂರು ಶ್ರೀ ದುರ್ಗಾಪರಮೇಶ್ವರೀ ದೇವಳದ ವರ್ಷಾವದಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಫೆ. 16 ಮಧ್ಯಾಹ್ನ ಹಗಲು ರಥೋತ್ಸವ ಜರಗಲಿದೆ.
ಬೆಳಿಗ್ಗೆ ಉತ್ಸವ ಪ್ರಯುಕ್ತ ನಾನಾ ಧಾರ್ಮಿಕ ಕಾರ್ಯಕ್ರಮಗಳು , ಶ್ರೀ ಚಂಡಿಕಾಯಾಗ,ಹಗಲು ರಥೋತ್ಸವ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ.
ನಾಳೆ ರಾತ್ರಿ ಮಹರಥೋತ್ಸವ: ಫೆ.17 ರಾತ್ರಿ 5ನೇದಿನದ ಆರಾಟ ವಿಶೇಷ ಉತ್ಸವ, ರಥೋತ್ಸವ ಜರಗಲಿದೆ.ಬೆಳಿಗ್ಗೆ ತುಲಾಭಾರ, ಛ್ತೂಯಗೂತ್ಸವ,ಮಧ್ಯಾಹ್ನ ಮಹಾಅನ್ನಸಂತೊರ್ಪಣೆ ರಾತ್ರಿ 8ಕ್ಕೆ ಕುಂಭ ಕಂಠಿಣಿ ದ್ಯೆವದ ಭಂಢಾರ ಆಗಮನ ರಾತ್ರಿ 10ರಿಂದ ಉತ್ಸವ ಪ್ರಯುಕ್ತ ನಾನಾ ಧಾಮರ್ಿಕ ವಿಧಿಗಳು ಶ್ರೀ ದೇವರ ಎದುರು ಶ್ರೀ ಕುಂಭಕಂಠಿಣಿ ದ್ಯೆವಕ್ಕೆ ಗಗ್ಗರ ಸೇವೆ ಬಳಿಕ ಕಟ್ಟೆಪೂಜೆ ,ರಥೋತ್ಸವ ಆವಭ್ರತೋತ್ಸವ ,ಧ್ವಜವರೋಹಣ ನಡೆಯಲಿದೆ.
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಇಂದು ಬೆಳಿಗ್ಗೆ 10ರಿಂದ ಕರುಣಾಕರ ಸಂಪಿಗೆ ಬಳಗದವರಿಂದ ಸೆಕ್ಷೊಪೋನ್ ವಾದನ, ಫೆ 17 ಮಂಗಳವಾರ ಸಂಜೆ 5.30ರಿಂದ ಅಶ್ವತಪುರ ಅಣ್ಣಿ ದೇವಾಡಿಗ ಬಳಗದವರಿಂದ ಸೆಕ್ಸೋಪೋನ್ ಕಛೇರಿ, ಬೋಜರಾಜನ್ ಬಳಗದ ಸೆಕ್ಸೋಪೋನ್ ನಾದಸ್ವರ ಕಚೇರಿ ನಡೆಯಲಿದೆ. ರಾತ್ರಿ 7.30ರಿಂದ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರಯೋಜಕತ್ವದಲ್ಲಿ ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ಶಿಷ್ಯವೃಂದದವರಿಂದ “ನಾಟ್ಯಾಧಾರಾ ಕಾರ್ಯಕ್ರಮ ಬಳಿಕ ಕಲಡ್ಕ ಶಿಲ್ಪ ಗೊಂಬೆ ಬಳಗದವರಿಂದ ಕರಗ ನೃತ್ಯ ಜರಗಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.
