ಸುದ್ದಿ9 ಕಟೀಲು: ದೇವರಿಗೆ ಚಿನ್ನ ಬೆಳ್ಳಿ ಹಣ ಎನೂ ಬೇಕಾಗಿಲ್ಲ ಆದರೂ ದೇವರಿಗೆ ನಾವು ಎಲ್ಲವನ್ನು ನೀಡುತ್ತೇವೆ ಅದು ನಮ್ಮ ಲಾಭಕ್ಕಾಗಿ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಭ್ರಾಮರೀವನದಲ್ಲಿ ನೂತನ ಗರ್ಭಗುಡಿಯಲ್ಲಿ ಭ್ರಾಮರೀದುರ್ಗಾಪರಮೇಶ್ವರೀ ದೇವರಿಗೆ ಬ್ರಹ್ಮಕಲಶಾಭಿಷೇಕ ಹಾಗೂ ಶತಚಂಡಿಕಾಯಾಗದ ಸಲುವಾಗಿ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.ಈ ಸಂದರ್ಭ ಭ್ರಾಮರೀವನದಲ್ಲಿ ಗರ್ಭಗುಡಿಯನ್ನು ನಿರ್ಮಿಸಿದ ದಾನಿ ಸತೀಶ್ ಶೆಟ್ಟಿ ಎರ್ಮಾಳು ಅವರನ್ನು ಸನ್ಮಾನಿಸಲಾಯಿತು. ಗರ್ಭಗುಡಿಯ ವಾಸ್ತುಶಾಸ್ತ್ರಜ್ಞ ಸುಬ್ರಹ್ಮಣ್ಯ ಭಟ್, ಉಸ್ತುವಾರಿ ವಹಿಸಿದ ಎಲ್ಲೂರು ವಿಷ್ಣುಮೂರ್ತಿ ಆಚಾರ್ಯ, ಎಕ್ಕಾರು ಹರೀಶ್ ಶೆಟ್ಟಿ, ಕಳತ್ತೂರು ರಾಘವೇಂದ್ರ ಭಟ್ರನ್ನು ಸನ್ಮಾನಿಸಲಾಯಿತು.
ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ, ಮಾಣಿಲ ಕ್ಷೇತ್ರದ ಮೋಹನದಾಸ ಸ್ವಾಮೀಜಿ, ಕೊಂಡೆವೂರು ಕ್ಷೇತ್ರದ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನಗೈದರು.
ಕೇಂದ್ರ ಸಚಿವ ಶ್ರೀಪಾದ ಎಸ್.ಒ.ನಾಯಕ್ ಮಾತನಾಡಿ ಕಟೀಲುನಂತಹ ದಾರ್ಮಿಕ ಕೇಂದ್ರಗಳಿಂದ ವಿದ್ಯಾದಾನವು ನಡೆಯುತ್ತಿದ್ದು ಇಂತಹ ಕ್ಷೇತ್ರದ ಕೀರ್ತಿ ಇನ್ನಷ್ಟು ಹೆಚ್ಚಾಗಲಿ ಎಂದು ಆಶಿಸಿದರು.
ಕದ್ರಿ ನವನೀತ ಶೆಟ್ಟಿ ಅವರ ಕಟೀಲ್ದ್ದಪ್ಪೆ ಉಳಾಲ್ದಿ ತುಳು ಕ್ರತಿಶ್ರೀ ಭ್ರಮರಾಂಬಿಕಾ ವಿಲಾಸ ಕನ್ನಡ ಬಾಷಾಂತರದ ಪುಸ್ತಕವನ್ನು ಇದೇ ಸಂದರ್ಭ ಬಿಡುಗಡೆಗೊಳಿಸಲಾಯಿತು, ಅಧ್ಯಕ್ಷ ಸ್ಥಾನ ವಹಿಸಿದ,ಸಾಂಸದ ನಳಿನ್ ಕುಮಾರ್ ಮಾತನಾಡಿ ಕಟೀಲು ಮಾತೆಯ ಅನುಗ್ರಹದಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ,ಇಂತಹ ದಾರ್ಮಿಕ ಕಾರ್ಯಕ್ರಮದಲ್ಲಿ ಬಾಗವಿಸುವ ಅವಕಾಶ ಬಂದೋದಗಿದ್ದೆ ನನ್ನ ಪುಣ್ಯ ಎಂದರು ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಜಿ.ಪಂ.ಸದಸ್ಯ ಈಶ್ವರ ಕಟೀಲು, ತಾ.ಪಂ.ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಪಂಚಾಯತ್ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಜೆ.ಸಿ.ಕುಮಾರ್, ಹೊಸಲೊಟ್ಟು ಬಾಬು ಶೆಟ್ಟಿ, ವಾಮಯ್ಯ ಶೆಟ್ಟಿ, ಬಜಪೆ ರಾಘವೇಂದ್ರ ಆಚಾರ್ಯ್, ಅಭಿಮಾನ್ ಕನ್ಸ್ಟ್ರಕ್ಷನ್ಸ್ನ ಸುಷ್ಮಾ ಎಂ.ಮಲ್ಲಿ, ಪದ್ಮನಾಭ ಪಯ್ಯಡೆ, ಗಂಗಾಧರ ಅಮೀನ್, ಕರುಣಾಕರ ಶೆಟ್ಟಿ, ಚಂದ್ರಹಾಸ ರೈ,ಆಡಳಿತಾಧಿಕಾರಿ ನಿಂಗಯ್ಯ,ಶ್ರೀಹರಿನಾರಾಯಣದಾಸ ಆಸ್ರಣ್ಣ ,ಸಾಯಿನಾಥ ಶೆಟ್ಟಿ ಉಪಸ್ಥಿತರಿದ್ದರು.
ಕಟೀಲು ಮೇಳದ ಕಲಾವಿದರಿಂದ ಯಕ್ಷಗಾನ ಗಾನಾಮೃತ, ಕದ್ರಿ ಗೋಪಾಲನಾಥ್ರಿಂದ ಸ್ಯಾಕ್ಸಫೋನ್ ವಾದನ ನಡೆಯಿತು.




