ರಷ್ಯಾ: ಬೀದಿ ಬದಿಯಲ್ಲಿ ರಾತ್ರಿ ವೇಳೆ ಆನಾಥವಾಗಿ ಬಿದ್ದಿದ್ದ ಮುದ್ದಾದ ಮಗುವೊಂದನ್ನು ಬೆಕ್ಕೊಂದು ಬೆಳಗಿನ ತನಕ ಜತನದಿಂದ ರಕ್ಷಿಸಿರುವ ಘಟನೆ ರಷ್ಯಾದ ಅಬ್ನಿಸ್ಕ್ ಎಂಬ ಪಟ್ಟಣದಲ್ಲಿ ನಡೆದಿದೆ.

cat

ಅಪರಿಚಿತರು ಕೇವಲ ಮೂರು ತಿಂಗಳ ಈ ಮಗುವನ್ನು ರಟ್ಟಿನ ಪೆಟ್ಟಿಗೆಯಲ್ಲಿಟ್ಟು ರಾತ್ರಿ ವೇಳೆ ಆಪಾರ್ಟ್ಮೆಂಟ್ ಒಂದರ ಮುಂದಿನ ಬೀದಿಯಲ್ಲಿ ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಬೆಕ್ಕೊಂದು ಕೊರೆಯುವ ಚಳಿಯಿದ್ದ ಕಾರಣ ಮಗುವಿನ ಪಕ್ಕದಲ್ಲೇ ಮಲಗಿ ಅದಕ್ಕೆ ಶಾಖ ದೊರೆಯುವಂತೆ ಮಾಡಿದೆ.

ಬೆಳಿಗ್ಗೆ ಮಗು ಅಳುತ್ತಿರುವ ಸದ್ದು ಕೇಳಿದ ಆಪಾರ್ಟ್ಮೆಂಟ್ ವಾಸಿಗಳು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಅಂಬುಲೆನ್ಸಿನಲ್ಲಿ ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ಬೆಕ್ಕು ಸಹ ಬಹು ದೂರದವರೆಗೆ ಅದನ್ನು ಹಿಂಬಾಲಿಸಿದೆ. ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಆರೋಗ್ಯವಾಗಿರುವುದಾಗಿ ತಿಳಿಸಿದ್ದು, ಒಂದು ವೇಳೆ ಬೆಕ್ಕು ಶಾಖ ನೀಡದಿದ್ದಲ್ಲಿ ಕೊರೆಯುವ ಚಳಿಗೆ ಮೂರು ತಿಂಗಳ ಈ ಮಗು ಸಾವನ್ನಪ್ಪುತ್ತಿತ್ತು ಎಂದು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *