ನವದೆಹಲಿ : ಚುನಾವಣಾ ಆಯೋಗದ ಅಧಿಕಾರಿಗಳು ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ನರೇಶ್‌ ಬಲ್ಯಾನ್‌ ಅವರ ದೆಹಲಿಯಲ್ಲಿನ ನಿವಾಸದ ಮೇಲೆ ದಾಳಿ ನಡೆಸಿ ಸಾವಿರಾರು ಸಂಖ್ಯೆಯ ಮದ್ಯದ ಬಾಟಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

Liquor_bottles

ದಾಳಿಯಲ್ಲಿ 5,000 ಲಿಕ್ಕರ್‌ ಬಾಟಲುಗಳನ್ನು ವಶಪಡಿಸಿಕೊಂಡಿರುವ ಚುನಾವಣಾ ಆಯೋಗದ ಅಧಿಕಾರಿಗಳು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನಲೆಯಲ್ಲಿ ಬಲ್ಯಾನ್ ವಿರುದ್ಧ ಎಫ್.ಐ.ಆರ್‌ ದಾಖಲಿಸಿಕೊಂಡಿದ್ದಾರೆ.

ಇದೇ ವೇಳೆ ನನ್ನ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿರುವ ಲಿಕ್ಕರ್‌ ಬಾಟಲುಗಳು ನನಗೆ ಸೇರಿದ್ದಲ್ಲ; ಅವು ನನ್ನ ಗ್ರಾಮದ ಬಿಜೆಪಿ ಕಾರ್ಯಕರ್ತನಿಗೆ ಸೇರಿದ್ದು ಅವುಗಳನ್ನು ಆತನಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು ಎಂದು ನರೇಶ್‌ ಬಲ್ಯಾನ್‌ ಹೇಳಿದ್ದಾರೆ.

ಬಲ್ಯಾನ್‌ ಅವರು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿಯಾಗಿ ಉತ್ತಮ ನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *