ಜೈಪುರ: ಚಲಿಸುತ್ತಿದ್ದ ಸ್ಲೀಪರ್ ಬಸ್ಸಿನಲ್ಲಿ 36 ವರ್ಷದ ಮಹಿಳೆ ಮೇಲೆ ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಅತ್ಯಾಚಾರ ನಡೆಸಿರುವ ಘಟನೆ ರಾಜಸ್ಥಾನದ ಜುಂಜುನು ಜಿಲ್ಲೆಯ ಪಿಲಾನಿ ಬಳಿ ನಡೆದಿದೆ.

rape
ಬುಧವಾರ ರಾತ್ರಿ ಸ್ಲೀಪರ್ ಬಸ್ ರಾಜಸ್ತಾನದಿಂದ ಹರ್ಯಾಣಗೆ ಹೊರಟಿತ್ತು. ಬಸ್‘ನಲ್ಲಿದ್ದವರೆಲ್ಲ ಮಾರ್ಗಮಧ್ಯೆ ಇಳಿದ ಬಳಿಕ ಒಂಟಿಯಾಗಿದ್ದ ಮಹಿಳೆಯನ್ನ ಗಮನಿಸಿದ ಕಂಡಕ್ಟರ್ ಮತ್ತು ಡ್ರೈವರ್ ರಾಕ್ಷಸರಂತೆ ಮೇಲರಗಿ ತಮ್ಮ ಕಾಮತೃಷೆ ತೀರಿಸಿಕೊಂಡಿದ್ದಾರೆ. ರಾತ್ರಿಯಿಡೀ ಮನಸೋ ಇಚ್ಛೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಅಜ್ಞಾತ ಸ್ಥಳವೊಂದರಲ್ಲಿ ಮಹಿಳೆಯನ್ನ ತಳ್ಳಿ ಹೋಗಿದ್ದಾರೆ.
ಕಾಮುಕ ಕಂಡಕ್ಟರ್‘ರನ್ನ 36 ವರ್ಷದ ಕಾಲಿಯಾ ಎಂದು ಗುರ್ತಿಸಲಾಗಿದ್ದು, ಡ್ರೈವರ್ ಗುರುತು ಪತ್ತೆಯಾಗಿಲ್ಲ. ತಲೆಮರೆಸಿಕೊಂಡಿರುವ ಇಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

By suddi9

Leave a Reply

Your email address will not be published. Required fields are marked *