ಶಬರಿಮಲೆ: ಶಬರಿಮಲೆಯ ಅಯ್ಯಪ್ಪ ಸನ್ನಿಧಾನದ ಪೊನ್ನಂವೀಡು ಮಲೆಯಲ್ಲಿ ಅಯ್ಯಪ್ಪನ ಮಕರ ಜ್ಯೋತಿ ದರ್ಶನ ಪಡೆದ ಗ್ರಾಮಸ್ಥರು ಪುನೀತರಾಗಿದ್ದಾರೆ. ಸಂಜೆ 6.55ರ ಸುಮಾರಿಗೆ ಈ ಜ್ಯೋತಿ ಕಂಡುಬಂದಿದ್ದು ಭಕ್ತರು ಭಾವಪರವಶರಾಗಿ ಹೋಗಿದ್ದರು.

ಲಕ್ಷಾಂತರ ಭಕ್ತರು ಶಬರಿ ಮಲೆಯಲ್ಲಿ ಬೀಡುಬಿಟ್ಟಿದ್ದು, ಮಕರ ಜ್ಯೋತಿಗಾಗಿ ಸಂಜೆಯಿಂದಲೇ ಕಾದುಕುಳಿತ್ತಿದ್ದರು. ಮೊದಲು ಎರಡು ಗಿಡುಗಗಳು ಹಾರಾಟ ನಡೆಸಿದ ಬಳಿಕ ನಕ್ಷತ್ರ ಗೋಚರಿಸಿತು. ಇದಾದ ಕೆಲವೇ ನಿಮಿಷಗಳ ಅಂತರದಲ್ಲಿ ಮಕರ ಜ್ಯೋತಿ ಕೆಲವೇ ಕೆಲವು ಸೆಕೆಂಡುಗಳ ಕಾಲ ಬೆಳಗಿ ದರ್ಶನ ನೀಡಿತು. ಸಾಕ್ಷಾತ್ ಅಯ್ಯಪ್ಪನೇ ಜ್ಯೋತಿಯ ಮೂಲಕ ದರುಶನ ನೀಡಿದ್ದಾನೆ ಎಂದು ಭಾವಿಸಿದ ಜನರು ಸ್ವಾಮಿಯೇ ಅಯ್ಯಪ್ಪ ಎಂದು ಕೂಗಿಕೊಂಡರು.


