ಈ ಜಗತ್ತು ಎರಡು ವಿಶ್ವ ಸಮರಗಳನ್ನು ಕಂಡಿದ್ದು ಭಾರೀ ರಕ್ತಪಾತ ನಡೆದಿತ್ತು. ಇನ್ನು ಮೂರನೇ ವಿಶ್ವಯುದ್ಧ ನಡೆದರೆ ಅದರ ಗತಿ ಹೇಗಿರಬಹುದೆಂದು ಊಹಿಸಲೂ ಕಷ್ಟ. ಯಾಕೆಂದರೆ ಅತ್ಯಾಧುನಿಕ ಶಸ್ತ್ರಾಗಳನ್ನು ಇಡೀ ಜಗತ್ತಲ್ಲಿ ಕೂಡಿಹಾಕುವುದನ್ನು ನೋಡಿದರೆ ಮೂರನೇ ಮಹಾಯುದ್ಧದ ಘೋರ ಪರಿಣಾಮವನ್ನು ಕಲ್ಪಿಸಲೂ ಸಾಧ್ಯವಿಲ್ಲ.
ಮೂರನೇ ಮಹಾಯುದ್ಧ ನಡೆಯುತ್ತದೆಯೇ? ಕೆಲವೊಂದು ಪ್ರಸಿದ್ದ ಜೋತಿಷ್ಯಿಗಳು ಕಳೆದ ನೀಡಿದ ಭವಿಷ್ಯ ಇಂತಿದೆ.

1. ಭವಿಷ್ಯಕಾರ ನಾಸ್ಟ್ರಾಡಾಮಸ್ ಹೇಳಿದ ಭವಿಷ್ಯವಾಣಿ:

Nostradamus_by_Cesar
ಈತನ ಪ್ರಕಾರ ಮೂರನೇ ವಿಶ್ವ ಸಮರವು 27 ವರ್ಷಗಳ ಕಾಲ ನಡೆಯುವುದು. ಆಗ ಜಗತ್ತಿನ ಪ್ರಮುಖ ನಗರಗಳು ಸಂಪೂರ್ಣವಗಿ ನಿರ್ಣಾಮಗೊಂಡು ಕೋಟ್ಯಂತರ ಜನರು ಸಯುತ್ತಾರೆ. ಈ ಜಗತ್ತಲ್ಲಿ ಭಯ ಹುಟ್ಟಿಸುವ ವ್ಯಕ್ತಿ(?)ಯ ಅಂಕೆಗೆ ಕಡಿವಾಣ ಬಿದ್ದು ಆತ ಸಾಯುತ್ತಾನೆ. ಮೂರನೇ ಮಹಾಯುದ್ಧ ನಡೆದ ನಂತರ ಇಡೀ ವಿಶ್ವದಲ್ಲಿ ಶಾಂತಿ ನೆಲೆಗೊಂಡು ಪ್ರಾಚೀನ ಕಾಲದ ಧರ್ಮವೊಂದು ಇಡೀ ಜಗತ್ತಲ್ಲಿ ನೆಲೆಗೊಳ್ಳುವುದು. (ಪ್ರಾಚೀನ ಕಾಲದ ಧರ್ಮ ಯಾವುದಿರಬಹುದು?)

2. ಎಡ್ಗರ್ ಕೈಸಿ ನುಡಿದ ಭವಿಷ್ಯವಾಣಿ:

edgarcayce
1877ರಲ್ಲಿ ಹುಟ್ಟಿದ ಖ್ಯಾತ ಭವಿಷ್ಯವಿಜ್ಞಾನಿ ಎಡ್ರ್ ಕೈಸಿ ಅಂದು ಹೇಳಿದ ಭವಿಷ್ಯ ಇಂದಿಗೂ ತಾಳೆ ಹೊಂದುತ್ತಿದೆ. ಅಮೇರಿಕಾ ಕೆಂಟುಕಿ ಎಂಬಲ್ಲಿನ ಕಾಪ್‍ಕಿಸ್‍ವಿಲ್ಲೆಯಲ್ಲಿ ಹುಟ್ಟಿದ ಈತ ಜಜನರನ್ನು ಸಮ್ಮೋಹಿನಿಗೊಳಿಸಿ ಅವರ ಅನೇಕ ರೋಗಗಳನ್ನು ಗುಣಪಡಿಸುತ್ತಿದ್ದ. ಅಲ್ಲದೆ ಗತ ಜನ್ಮದ ಬಗ್ಗೆ ಹೇಳುತ್ತಿದ್ದ. ಅಟ್ಲಾಂಟಿಕ್ ನಗರ ಹೇಗೆ ನಾಶಗೊಂಡಿತು? ಬರ್ಮುಡಾ ಟ್ಯಯಾಂಗಲ್‍ನಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಎಂದೆಲ್ಲಾ ಆತ ಹೇಳಿರುವುದರ ಬಗ್ಗೆ ಇಂದಿಗೂ ಚರ್ಚೆ ನಡೆಯುತ್ತಿದೆ. ಈತನ ಪ್ರಕಾರ ಮೂರನೇ ಮಹಾಯುದ್ಧ ಇಜಿಪ, ಲಿಬಿಯಾ ಈ ಪರಿಸರದಲ್ಲಿ ನಡೆದು ಮುಂದೆ ಇದು ಇಡೀ ವಿಶ್ವಕ್ಕೆ ಪಸರಲಿದೆ.

3. ಅಮೆರಿಕಾದ ಖ್ಯಾತ ಜ್ಯೋತಿಷಿ: ಶ್ರೀಮತಿ ಜೆನ್ ಡಿಕ್ಸನ್ ಅವರ ಭವಿಷ್ಯವಾಣಿ:

Jeane_Dixon
ಈಕೆ 1904ರಲ್ಲಿ ಅಮೇರಿಕಾದ ವಿಸ್ಕೋನ್‍ಸಿನ್ ಎಂಬಲ್ಲಿನ ಮೆಡ್‍ಫೋರ್ಡ್ ನಗರದಲ್ಲಿ ಹುಟ್ಟಿದಳು. ಈಕೆಯ ಪ್ರಕಾರ 2020ರಲ್ಲಿ ಮಹಾಯುದ್ಧ ಆರಂಭವಾಗುತ್ತದೆ. ಈ ಸಮಯ ಯೇಸುಕ್ರಿಸ್ತರು ಆಗಮಿಸಿ ಸೈತಾನ್, ಕ್ರೈಸ್ತ ವಿರೋಧಿ ಸುಳ್ಳು ಪ್ರವಾದಿಗಳ ವಿರುದ್ಧ ಹೋರಾಡಿ ಅವರನ್ನು ಸಂಪೂರ್ಣವಾಗಿ ಸೋಲಿಸುತ್ತಾರೆ.

By suddi9

Leave a Reply

Your email address will not be published. Required fields are marked *