ಸುದ್ದಿ9 ಬಜಪೆ: ದೇಶದಲ್ಲಿ ವಿದ್ವಂಸಕ ಕೃತ್ಯ ಎಸಗಲು ಸಜ್ಜಾಗಿದ್ದ ನಿಶೇದಿತ ಉಗ್ರರ ಸಂಘಟನೆಗೆ ಸೇರಿದ್ದ ಶಂಕಿತ ಉಗ್ರರನ್ನು ಬಜಪೆ ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಬಂಧಿಸಲಾಗಿದೆ. ಬಟ್ಕಳ ಮೂಲದ ರಿಯಾಜ್ ಅಹಮದ್ ಸೈಯದ್ (33) ಬಂಧಿತ ಆರೋಪಿ. ಬೆಂಗಳೂರು ಹಾಗೂ ಹೈದರಾಬಾದ್‍ನಲ್ಲಿ ಉಗ್ರರ ಚಟುವಟಿಕೆಗೆ ಸಂಚು ಹೂಡಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ 11.20ರ ಕೊಲ್ಲಿ ರಾಷ್ಟ್ರಕ್ಕೆ ತೆರಳುವ ವಿಮಾನದಲ್ಲಿ ಪಲಾಯಣಗೈಯಲು ಯತ್ನಿಸಿದ್ದ ವೇಳೆ ಬೆಂಗಳೂರು ತನಿಖಾಧಿಕಾರಿಗಳು ಬಂಧಿಸಿದ್ದಾರೆ.

By suddi9

Leave a Reply

Your email address will not be published. Required fields are marked *