ಸುದ್ದಿ9 ಕಿನ್ನಿಗೋಳಿ: ಸೂರಿಂಜೆ ಉದ್ಯಮಿ ಕೇಶವ್ ಶೆಟ್ಟಿ ಅಮಾನುಶ ಹತ್ಯೆಯನ್ನು ಖಂಡಿಸಿ ಸೂರಿಂಜೆಯ ದೇವಸ್ಥಾನದ ದ್ವಾರದ ಸಮೀಪ ಹಿಂದು ಜಾಗಾರಣಾ ವೇದಿಕೆ ನೇತೃತ್ವದಲ್ಲಿ ಅವರ ಶವವಿಟ್ಟು ಪ್ರತಿಭಟನೆ ಕೈಗೊಳ್ಳಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸತ್ಯಜಿತ್ ಸುರತ್ಕಲ್ ಹತ್ಯೆಗೀಡಾದ ಕೇಶವ್ ಅವರು ಗಾಂಜಾ ವಹಿವಾಟಿನ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿರುವುದಕ್ಕೆ ಹತ್ಯೆ ನಡೆದಿದೆ. ಇದಕ್ಕೆ ಪೋಲಿಸ್ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು. ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದರು.

