ಮುಂಬೈ; ಈತನ ಹೆಸರಿನಂತೆಯೇ ಕಮಾಲ್ ಮಾಡುವುದರಲ್ಲೀತ ಪ್ರಖ್ಯಾತ. ತನ್ನ ಹೇಳಿಕೆ ಮತ್ತು ನಡವಳಿಕೆಗಳಿಂದ ಬಾಲಿವುಡ್ ಜನರ ಅಷ್ಟೊಂದು ಇಷ್ಟದ ವ್ಯಕ್ತಿಯಲ್ಲದ ಕಮಾಲ್ ರಶೀದ್ ಖಾನ್ ಅಲಿಯಾಸ್ ಕೆಆರ್ಕೆ ಬಾಲಿವುಡ್ ನಿದರ್ೇಶಕ ಮಹೇಶ್ ಭಟ್ ಪುತ್ರಿ ಆಲಿಯಾ ಭಟ್ ನನ್ನ ಪತ್ನಿ ಎಂದು ಹೇಳುವ ಮೂಲಕ ವಿವಾದವೆಬ್ಬಿಸಿದ್ದಾನೆ.
ಕೋಟ್ಯಾಧಿಪತಿ ಕೆಆರ್ಕೆ ತಾನೊಬ್ಬ ದೊಡ್ಡ ಬಾಲಿವುಡ್ ನಟನೆಂಬಂತೆ ಬೀಗುವಾತ. ಆದರೆ ಆತನಿಗೆ ಇದುವರೆಗೂ ಯಾರೂ ಕೂಡಾ ಕರೆದು ಕೆಲಸ ನೀಡಿಲ್ಲ. ‘ದೇಶ್ದ್ರೋಹಿ’ ಎಂಬ ಸಿನಿಮಾ ತಯಾರಿಸಿ ಅದರಲ್ಲಿ ನಾಯಕನಾಗಿ ನಟಿಸಿದರೂ ಚಿತ್ರ ತೋಪೆದ್ದಿತ್ತು. ಆದರೂ ಆತನ ದುರಹಂಕಾರಕ್ಕೇನೂ ಕಡಿಮೆಯಿರಲಿಲ್ಲ. ಈಗ ಆಲಿಯಾಳೇ ತನ್ನ ಪತ್ನಿ ಎಂದು ಹೇಳಿಕೆ ನೀಡುವ ಮೂಲಕ ವಿವಾದದ ಜೊತೆಗೆ ಕೈಯಲ್ಲಿದ್ದ ಒಂದು ಸಿನಿಮಾವನ್ನೂ ಕಳೆದುಕೊಂಡಿದ್ದಾನೆ. ಭಟ್ ಕ್ಯಾಂಪ್ನ ಮೋಹಿತ್ ಸೂರಿ ನಿದರ್ೇಶನದ ‘ವಿಲನ್’ ಚಿತ್ರದಲ್ಲಿ ಕಮಾಲ್ಗೆ ಒಂದು ಪಾತ್ರ ನೀಡಲಾಗಿತ್ತು. ಆದರೆ ಆಲಿಯಾ ಬಗ್ಗೆ ಆತ ನೀಡಿರುವ ಹೇಳಿಕೆಯಿಂದ ಕೋಪಗೊಂಡಿರುವ ಆಕೆಯ ಸೋದರ ಸಂಬಂಧಿ ಸೂರಿ ಆತನಿಗೆ ತನ್ನ ಚಿತ್ರದಿಂದ ಗೇಟ್ಪಾಸ್ ನೀಡಿದ್ದಾನೆ. kamaal2 copy
ಕಮಾಲ್ ತನ್ನ ಹೇಳಿಕೆಯನ್ನು ಟ್ವಿಟರ್ನಲ್ಲಿ ಹಾಕಿದ್ದು ಆಕೆಯ ಜೊತೆ ಹೇಗೆಲ್ಲಾ ರೋಮ್ಯಾನ್ಸ್ ಮಾಡುತ್ತೇನೆ ಎಂಬುದನ್ನೂ ಬರೆದಿದ್ದಾನೆ. ಈ ವಿಚಾರವು ಹರಡುತ್ತಿದ್ದಂತೆ ಎಚ್ಚರಗೊಂಡ ಕಮಾಲ್ ಅದು ನನ್ನ ಟ್ವಿಟರ್ ಖಾತೆಯಲ್ಲ ಯಾರೋ ಫೇಕ್ ಟ್ವಿಟರ್ ಖಾತೆಯ ಮೂಲಕ ಈ ರೀತಿಯ ಬರಹಗಳನ್ನು ಅಂಟಿಸಿದ್ದಾರೆ ಎಂದು ಆರೋಪಿಸಿದ್ದಾನೆ. ಅದು ನಿಜವಾಗಿಯೂ ಆತನ ಖಾತೆಯೇ ಅಥವಾ ಫೇಕ್ ಖಾತೆಯೇ ಎಂದು ಭಟ್ ಕ್ಯಾಂಪ್ ಕೂಡಾ ತಲೆ ಕೆರೆದುಕೊಳ್ಳುತ್ತಿದೆ. ಆದರೆ ಕಮಾಲ್ ವ್ಯಕ್ತಿತ್ವದ ಬಗ್ಗೆ ಸರಿಯಾಗಿ ತಿಳಿದಿರುವ ಕೆಲವರು ಅದು ಆತನದ್ದೇ ಕೆಲಸ ಎಂದು ಪಿಸುಗುಟ್ಟುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *