ಮುಂಬೈ: ಬಹುಶಃ ಇದು ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿ ಎಂದನಿಸುತ್ತದೆ. ಸಿನಿಮಾಗಳ ನಿರ್ಮಾಣವನ್ನು ಮಾಡುತ್ತಿದ್ದವನು ಮನುಷ್ಯ ಆದರೆ ಮೊತ್ತಮೊದಲ ಬಾರಿ ಒಂದು ನಾಯಿ ಚಿತ್ರ ನಿರ್ಮಾಣದಲ್ಲಿ ಪಾಲು ಪಡೆಯಲಿದೆ. ಅದೂ ಕೂಡಾ ಅಂತಿಂತ ಚಿತ್ರವಲ್ಲ ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂನ ಕತೆಯುಳ್ಳ ಸಿನಿಮಾ. ವಿಷಯ ಇಷ್ಟೇ, ಸುನಿಲ್ ಬೊಹ್ರಾಗೆ ತನ್ನ ನಾಯಿ ಝೋರಾ ಎಂದರೆ ಪಂಚಪ್ರಾಣ. ಈ ಸುನೀಲ್ ಬೊಹ್ರಾ ಚಿತ್ರನಟಿ ಪ್ರಬ್ಲೀನ್ ಳ ಗಂಡ. ಇನ್ನು ಈಕೆ ಯಾರೆಂದು ಕೇಳಿದರೆ ಶಹೀದ್ ಸಿನಿಮಾ ನೋಡಿದವರಿಗೆ ಈಕೆಯ ಪರಿಚಯವಿರಬಹುದು. ಸುನೀಲ್ ಸದ್ಯ ಒಂದು ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದು ಅದರ ಸಹನಿರ್ಮಾಪಕಳನ್ನಾಗಿ ತನ್ನ ಮುದ್ದಿನ ನಾಯಿ ಝೊರಾಳನ್ನು ಆರಿಸಿಕೊಂಡಿದ್ದಾನೆ. ಅದ್ಯಾಕೆ ಹಾಗೆ ಎಂದು ಕೇಳಿದರೆ. ಪ್ರತಿಯೊಂದು ಮನುಷ್ಯ ಸಂಬಂಧಗಳು ಕೊಡುಕೊಳ್ಳುವಿಕೆಯ ಸ್ವಾರ್ಥದಿಂದ ಕೂಡಿದೆ. ಆದರೆ ಝೊರಾ ಮಾತ್ರ ಇದಕ್ಕೆ ಅಪವಾದ. ಆಕೆ ನನ್ನಿಂದ ಪ್ರೀತಿಯನ್ನು ಹೊರತುಪಡಿಸಿ ಏನನ್ನೂ ಬಯಸುವುದಿಲ್ಲ. ಆದಲ್ಲದೆ ಆಕೆ ನನ್ನ ಅದೃಷ್ಟದ ನಾಯಿ, ಹಾಗಾಗಿ ನನ್ನ ಮುಂದಿನ ಪ್ರತಿಯೊಂದಿ ಯೋಜನೆಯಲ್ಲೂ ಆಕೆಯನ್ನು ಸಹನಿರ್ಮಾಪಕಳನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ.
ಈತನ ಈ ವಿಶಾಲ ಹೃದಯಕ್ಕೆ ಮನಮಂದಿಯಿಂದ ಆಕ್ಷೇಪ ವ್ಯಕ್ತವಾಗಿಲ್ಲವೇ ಎಂದು ಕೇಳಿದರೆ. ಖಂಡಿತವಾಗಿಯೂ ಇಲ್ಲ, ನಮ್ಮ ಮನೆಮಂದಿಗೆಲ್ಲಾ ಝೊರಾ ಮಗಳಿಂದ್ದಂತೆ ನನ್ನ ಪತ್ನಿಯಂತೂ ಝೊರಾಳಿಗಾಗಿಯೇ ಒಂದು ಜೀಪ್ ಸಹ ಖರೀದಿಸಿದ್ದಾಳೆ ಎಂದು ಹೇಳುತ್ತಾರೆ. ಅಂತೂ ಈ ಫ್ಯಾಮಿಲಿಯ ನಾಯಿ ಪ್ರೀತಿಯನ್ನು ಮೆಚ್ಚಲೇ ಬೇಕು ಅಲ್ಲವೇ?.

