ಮುಂಬೈ: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವವರ ಪೈಕಿ ಬಾಲಿವುಡ್ ಐಟಂ ಗರ್ಲ್ ರಾಖಿ ಸಾವಂತ್ ಳಿಗೆ ಮೊದಲ ಸ್ಥಾನ. ಬಾಯಿ ತೆರದರೆ ವಿವಾದ ಹುಟ್ಟು ಹಾಕುವ ರಾಖಿ ತನ್ನ ನೇರ ಮಾತುಗಳಿಂದಾಗಿ ಎಲ್ಲರ ಮೆಚ್ಚುಗೆಯನ್ನೂ ಗಳಿಸಿದವಳು.
ರಾಜಕೀಯದ ಬಗ್ಗೆ ಅಷ್ಟೊಂದು ಮಾತನಾಡದ ರಾಖಿ ಬಿಹಾರದಲ್ಲಿ ತನ್ನ ಭೋಜ್ ಪುರಿ ಚಿತ್ರವೊಂದರ ಪ್ರಮೋಶನ್ ಗಾಗಿ ಬಂದ ಸಮಯದಲ್ಲಿ ಆಡಿರುವ ಮಾತುಗಳು ಆಕೆಯನ್ನು ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿಸಿದೆ.

ನಾನು ರಾಹುಲ್ ಗಾಂಧಿಯನ್ನು ವಿವಾಹವಾಗಲು ಸಿದ್ಧಳಿದ್ದೇನೆ, ಆದರೆ ಒಂದೇ ಒಂದು ಷರತ್ತೆಂದರೆ ದೇಶದ ಮುಂದಿನ ಪ್ರಧಾನಿ ಮಾತ್ರ ನರೇಂದ್ರ ಮೋದಿಯೇ ಆಗಬೇಕು ಎಂದು ಹೇಳುವ ಮೂಲಕ ರಾಜಕೀಯದ ಎರಡು ಧ್ರುವಗಳನ್ನು ಒಂದೇ ಸಾಲಿನಲ್ಲಿ ಮೆಚ್ಚಿಸುವ ಪ್ರಯತ್ನ ಮಾಡಿದ್ದಾಳೆ. ತನ್ನ ಮಾತನ್ನು ಮುಂದುವರಿಸಿದ ರಾಖಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾರ್ಯ ವೈಖರಿಯನ್ನು ಕೂಡಾ ಹೊಗಳಿದ್ದಾಳೆ. ಅವರ ನೇತೃತ್ವದಲ್ಲಿ ಬಿಹಾರ ಉತ್ತಮ ಅಭಿವೃದ್ಧಿ ಕಂಡಿದೆ ಎಂದಾಕೆ ಸರ್ಟಿಫಿಕೆಟ್ ನೀಡಿದ್ದಾಳೆ.
