ಬಂಟ್ವಾಳ : ಶಿಕ್ಷಣ ಜ್ಞಾನ ಪತ್ರಿಕೆಯ ಆಶ್ರಯದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟೀ ಕೆ.ಕೃಷ್ಣಕುಮಾರ್ ಪೂಂಜ ರವರನ್ನು ” ಸಮಾಜ ಸೇವಾ ರತ್ನ ” ಪ್ರಶಸ್ತಿ ನೀಡಿ ಗೌರವಿಸಲಾಯಿತು . ಈ ಸಂದರ್ಭದಲ್ಲಿ ಕೆ.ವಿ.ವಿ.ಎನ್ ಸಂಸ್ಥೆ ಬೆಂಗಳೂರಿನ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ , ಚಂದನ ಟಿ.ವಿ.ಯ ಡಾ.ನಾ.ಸೋಮೇಶ್ವರ , ಹೆಬ್ಬಾಳ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಮಾ ಆರ್. , ಮತ್ತು ಶಿಕ್ಷಣ ಜ್ಞಾನ ಪತ್ರಿಕೆಯ ಎಸ್.ವಿ.ನಾಗರಾಜ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

