ಗುರುಪುರ : ವಾಮಂಜೂರಿನ ಜಿ. ಆದಿತ್ಯ ಕೆ ಅವರು ವಿಮಾನಯಾನದಲ್ಲಿ ಯಶಸ್ವಿಯಾಗಿ ಪೈಲೆಟ್ ತರಬೇತಿ ಪೂರ್ಣಗೊಳಿಸಿ ವಾಣಿಜ್ಯ ಪೈಲೆಟ್ ಪರವಾನಿಗೆ(ಸಿವಿಲ್) ಪಡೆದುಕೊಂಡಿದ್ದಾರೆ.

ನೀರುಮಾರ್ಗದ ಕ್ಯಾಂಬ್ರಿಡ್ಜ್ನಲ್ಲಿ ಪ್ರಾಥಮಿಕ ಹಾಗೂ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದುಕೊಂಡಿದ್ದಾರೆ. ಮುಂಬೈ ಅಂಧೇರಿಯ ಅಲಾಯ್ಡ್ ವಿಂಗ್ಸ್ ಪೈಲೆಟ್ ಟ್ರೆÊನಿಂಗ್ ಇನ್ಸ್ಟಿಟ್ಯೂಟ್ನಲ್ಲಿ ವೃತ್ತಿಪರ ಪೈಲೆಟ್ ತರಬೇತಿ ಪಡೆದಿರುವ ಇವರು ಅಮೆರಿಕದ ಫ್ಲೋರಿಡಾದ ಪೈಲೆಟ್ ಟ್ರೆÊನಿಂಗ್ ಸೆಂಟರ್ನಲ್ಲಿ ವೃತ್ತಿಪರತೆ ಬಗ್ಗೆ ಉನ್ನತ ತರಬೇತಿಯೊಂದಿಗೆ ವಾಣಿಜ್ಯ ಪೈಲೆಟ್ ಲೈಸೆನ್ಸ್(ಸಿಪಿಎಲ್) ಪಡೆದುಕೊಂಡಿದ್ದಾರೆ. ವಾಮಂಜೂರಿನಲ್ಲಿ ವಾಸ್ತವ್ಯ ಹೊಂದಿರುವ ಇವರು ಗುರುಪುರ ಕಿರಣ್ ಕುಮಾರ್ ಮತ್ತು ಸಿ. ಎಸ್. ಲೀಲಾವತಿ ದಂಪತಿಯ ಪುತ್ರರಾಗಿದ್ದಾರೆ.
