ಅಪಘಾನಿಸ್ತಾನ: ಪೇಶಾವರದ ಮಿಲಿಟರಿ ಶಾಲೆಯಲ್ಲಿ ಮಕ್ಕಳ ಮೇಲೆ ಪೈಶಾಚಿಕ ಕೃತ್ಯ ಎಸಗಿ ಅಮಾಯಯಕ 132 ಮಕ್ಕಳ ಸಾವಿಗೆ ಕಾರಣವಾಗಿದ್ದ ತೆಹ್ರಿಕ್ ಇ ತಾಲಿಬನಿ ಸಂಘಟನೆಯ ಮುಖ್ಯಸ್ಥನನ್ನು ಪಾಕಿಸ್ತಾನ ಸೇನಾಪಡೆ ಕೊಂದಿರುವುದಾಗಿ ಹೇಳಿಕೊಂಡಿದ್ದಾದರೂ ಅದಿನ್ನೂ ದೃಢಪಟ್ಟಿಲ್ಲ ಎಂದು ಪಾಕಿಸ್ತಾನದ ಸೇನಾ ಇಲಾಖೆ ತಿಳಿಸಿದೆ.

`ಮಿಲಿಟರಿ ಇಲಾಖೆಯ ಫೇಸ್ ಬುಕ್ ಪೇಜಲ್ಲಿ ಈ ಬಗ್ಗೆ ಹೇಳಿದೆಯಾದರೂ ಟ್ವಿಟರ್ ನಲ್ಲಿ ಇನ್ನೂ ಅದನ್ನು ದೃಢಪಡಿಸಿಲ್ಲ. ಆದ್ದರಿಂದ ಫಜುಲುಲ್ಲಾ ಸತ್ತಿದ್ದಾನಾ ಅಥವಾ ಬದುಕಿದ್ದಾನಾ ಎಂದು ಸರಿಯಾಗಿ ತಿಳಿದುಬಂದಿಲ್ಲ. ಉನ್ನತ ಮಿಲಿಟರಿ ಅಧಿಕಾರಿಗಳ ಪ್ರಕಾರ ಆತ ಸತ್ತಿದ್ದಾನೆಂದು ಹೇಳಿದ್ದಾರಾದರೂ ಅಕ್ಕೆ ಸಂಬಂಧಪಟ್ಟ ಸಾಕ್ಷಿ ಇನ್ನೂ ಸಿಕ್ಕಿಲ್ಲ. ಒಂದು ವೇಳೆ ಆತ ಸತ್ತಿದ್ದು ನಿಜವೇ ಆಗಿದ್ದರೆ ಪತ್ರಿಕಾಗೋಷ್ಠಿ ಕರೆದು ಈ ಬಗ್ಗೆ ದೃಢಪಡಿಸಲಾಗವುದು’ ಎಂದುಇಲಾಖೆ ಹೇಳಿದೆ.
