ಇಸ್ಲಮಾಬಾದ್: `ಸೈನಿಕರ ಮಕ್ಕಳನ್ನು ಕೊಂದು ಮುಗಿಸಿದೆವು, ಇನ್ನು ನಮ್ಮ ಗುರಿ ಪಾಕಿಸ್ತಾನದ ರಾಜಕಾರಣಿಗಳ ಮಕ್ಕಳು..’ ಹೀಗೆಂದು ವಿಕೃತವಾಗಿ ಹೇಳಿಕಕೆ ನೀಡಿದವರು ಬೇರ್ಯಾರೂ ಅಲ್ಲ, ತಾಲಿಬಾನ್ ಉಗ್ರರು.

ಪೇಶಾವರದ ಸೈನಿಕ ಶಾಲೆಯ 132 ಮಕ್ಕಳನ್ನು ಕೊಂದು ವಿಕಟ ನಗೆ ಬೀರುತ್ತಿರುವ ಉಗ್ರರು ಇತ್ತೀಚೆಗೆ ಪಾಕಿಸ್ತಾನ ಸೈನ್ಯ 57 ಉಗ್ರರನ್ನು ಕೊಂದಿರುವುದಕ್ಕೆ, ಇಬ್ಬರು ತಾಲಿಬಾನ್ ಕಮಾಂಡರ್ ಗಳನ್ನು ಮುಗಿಸಿರುವುದಕ್ಕೆ ಹಾಗೂ ಈಗಷ್ಟೆ ನಡೆದ ತಹ್ರೀಕ್ ಇ ತಾಲಿಬಾನಿ ಸಂಘಟನೆಯ ಮುಖ್ಯಸ್ಥ ಫಜುಲುಲ್ಲ ನನ್ನು ಕೊಂದಿರುವುದಕ್ಕೆ ಪ್ರತೀಕಾರ ತೀರಿಸಿಯೇ ಸಿದ್ಧ ಎಂದು ತಾಲಿಬಾನಿ ಉಗ್ರರು ಘೋಷಿಸಿದ್ದಾರೆ ಎಂದು ಪಾಕಿಸ್ತಾನದ ಸುದ್ದಿಸಂಸ್ಥೆ ಹೇಳಿಕೊಂಡಿದೆ.
ತಮ್ಮನ್ನು ಕೆಣಕಲು ಬರುವ ಪಾಕಿಸ್ತಾನ ಸರಕಾರವನ್ನು ಹಳಿಯಲು ನಾವು ಮುಂದೆ ರಾಜಕಾರಣಿಗಳ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತೇವೆ ಎಂದು ಉಗ್ರರು ಹೇಳಿಕೆ ನೀಡಿದ್ದಾರೆ

