ಬಂಟ್ವಾಳ: ಶ್ರೀ ದುರ್ಗಾ ಮಹಿಳಾ ಸಮಿತಿ ಕರೆಂಕಿ ಇದರ ಪ್ರಥಮ ವರ್ಷದ ಆಟಿದ ಕೂಟ ಕಾರ್ಯಕ್ರಮವು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಕರೆಂಕಿ ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಕರೆಂಕಿ ಇದರ ಸಹಯೋಗದೊಂದಿಗೆ ಕರೆಂಕಿಯ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಕರೆಂಕಿ ಕ್ಷೇತ್ರದ ಪ್ರಧಾನ ಅರ್ಚಕ ಗುರುರಾಜ್ ಭಟ್ ಅವರು ಹಿಂಗಾರವನ್ನು ಅರಳಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಆಟಿಯ ವಿಶೇಷತೆಯ ಬಗ್ಗೆ ತಿಳಿಸಲಾಯಿತು. ನಂತರ ವಿವಿಧ ತುಳುನಾಡಿನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶ್ರೀ ದುರ್ಗಾ ಮಹಿಳಾ ಸಮಿತಿ ಕರೆಂಕಿಯ ಸದಸ್ಯರು
ತಯಾರಿಸಿದ ಆಟಿ ತಿಂಗಳ ವಿಶೇಷ ಖಾದ್ಯಗಳನ್ನು ಬಡಿಸಲಾಯಿತು.ಸಮಾರೋಪ ಸಮಾರಂಭದ ವೇದಿಕೆಯಲ್ಲಿಶ್ರೀ ಕ್ಷೇತ್ರ ಕರೆಂಕಿಯ ಅರ್ಚಕರಾದ ಅಶ್ವಿನ್ ರಾವ್ ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಚಂದ್ರ ಶೆಟ್ಟಿ ದಂಡೆ ,ಪ್ರಗತಿಪರ ಕೃಷಿಕರಾದ ನಾರಾಯಣ ಗೌಡ ಕರೆಂಕಿ, ಹಿಂದೂ ಜನಜಾಗೃತಿ ಸಮಿತಿಯ ರಾಧಾಕೃಷ್ಣ,ಉದ್ಯಮಿಗಳಾದ ಧರ್ಣಪ್ಪ ಪೂಜಾರಿ,ಹರೀಶ್ ಕೋಟ್ಯಾನ್ ಮಡಿವಾಳಬೆಟ್ಟು, ಎಂ. ಭಾಸ್ಕರ ಕುಲಾಲ್ ಕರೆಂಕಿ,ವಿಲಾಸಿನಿ ಶಾಂತವೀರ ಪೂಜಾರಿ ಫರ್ಲಾ,ಮೀನಾಕ್ಷಿ ಜಗನ್ನಿವಾಸ ಗೌಡ ಮಣಿ, ಪ್ರಪುಲ್ಲಾ ಡಿ. ದಡ್ಡಲಕಾಡು,ಲೀಲಾವತಿ ಶ್ವೇತಾ ಸಂತೋಷ್ ದಾಸರಕೋಡಿ ಮೊದಲಾದವರು ಉಪಸ್ಥಿತರಿದ್ದರು.
ಹರ್ಷಿತಾ ದಿನೇಶ್ ಕರೆಂಕಿ ಆಟಿ ತಿಂಗಳ ವಿಶೇಷತೆಯನ್ನು ತಿಳಿಸಿದರು. ದೇವಕಿ ರತ್ನಾಕರ ಕರೆಂಕಿ ಸ್ವಾಗತಿಸಿದರು. ಶ್ವೇತಾ ಸಂತೋಷ್ ದಾಸರಕೋಡಿ ವಂದಿಸಿದರು. ವೇದಾವತಿ ಸತೀಶ್ ಕರೆಂಕಿ, ಚೇತನಾ ರವಿ ಕರೆಂಕಿ ಕಾರ್ಯಕ್ರಮ ನಿರೂಪಿಸಿದರು.
