ಬಂಟ್ವಾಳ: ವಿದ್ಯಾರ್ಥಿಗಳು ತನಗೆ ಶಿಕ್ಷಣವನ್ನು ನೀಡಿದ  ಹಾಗೂ ತನ್ನ ಜೀವನದ ಪ್ರತಿಯೊಂದು ಸ್ತರಗಳಲ್ಲಿ  ಮಾರ್ಗದರ್ಶನವಿತ್ತ ಗುರುಗಳ ಆಶೀರ್ವಾದ ಪಡೆದುಕೊಂಡು ಮುಂದೆ ಸಾಗಿದಾಗ ಸುಲಭವಾಗಿ ತನ್ನ ಕಾರ್ಯಯೋಜನೆಯೊಂದಿಗೆ ಗುರಿ ಮುಟ್ಟಲು ಸಾಧ್ಯ ಎಂದು ಸಿದ್ದಕಟ್ಟೆ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಭಾಕರ ಪ್ರಭು ಹೇಳಿದ್ದಾರೆ.

ಸಿದ್ದಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಸಾಯನ ಶಾಸ್ತ್ರ ಉಪನ್ಯಾಸಕರಾಗಿ ನಿವೃತ್ತಿಗೊಂಡ ಮುಕುಂದ ಭಟ್ ರಿಗೆ ಹಮ್ಮಿಕೊಂಡ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕನ್ಯಾನ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮಂಜುನಾಥ್ ಮಾತನಾಡಿ ಆಕಸ್ಮಿಕವಾಗಿ ಭೇಟಿಯಾಗಿ ಆತ್ಮೀಯರಾದ ಮುಕುಂದ ಭಟ್ ರವರ ಸರಳತೆ, ತಾಳ್ಮೆ, ಆತ್ಮೀಯತೆ ಬಗ್ಗೆ ತನ್ನ ಒಡನಾಟವನ್ನು ಹಂಚಿಕೊಂಡರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಡಾ ಸುದೀಪ್ ಕುಮಾರ್, ನಿವೃತ್ತ ಪ್ರಾಂಶುಪಾಲ ಶ್ರೀನಿವಾಸ ನಾಯ್ಕ ಸೇರಿದಂತೆ ಕಾಲೇಜು ಸಹಪಾಠಿಗಳು, ವಿದ್ಯಾರ್ಥಿಗಳು ನಿವೃತ್ತರಿಗೆ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲರಾದ ಉದಯಕುಮಾರ್ ವಹಿಸಿದ್ದರು.
ಗೌರವರ್ಪಣೆ ಸ್ವೀಕರಿಸಿ ಮಾತನಾಡಿದ ಮುಕುಂದ ಭಟ್ ನಾನು ಸಲ್ಲಿಸಿದ ಸೇವೆಯು ನನ್ನ ಜವಾಬ್ದಾರಿ ಮತ್ತು ಕರ್ತವ್ಯದ ಭಾಗವಾಗಿದ್ದು ನನಗೇನು ಹೊಸತೇನು ಅಲ್ಲ ಈ ನಿಟ್ಟಿನಲ್ಲಿ ನನಗೆ ಮಾಡಿದ ಗೌರವರ್ಪಣೆಗೆ ಚಿರಋಣಿಯಾಗಿದ್ದೇನೆ ಎಂದರು.
ವೇದಿಕೆಯಲ್ಲಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನೋಣಯ ಶೆಟ್ಟಿಗಾರ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಮಂದಾರತಿ ಎಸ್ ಶೆಟ್ಟಿ, ಬೇಬಿ ಪೂಜಾರಿ ದೇವಸ, ಕಾಲೇಜು ಉಪನ್ಯಾಸಕರು ಉಪಸ್ಥಿತರಿದ್ದರು.
ಉಪನ್ಯಾಸಕ ಭಾಸ್ಕರ ಎಂ ಸ್ವಾಗತಸಿದರು. ಉಪನ್ಯಾಸಕಿ ರೇಖಾ ಬಾಳಿಗ ವಂದಿಸಿದರು.
ಉಪನ್ಯಾಸಕ ಸಂಜಯ್ ಬಿ ಎಸ್ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *