ಬಂಟ್ವಾಳ ಬಡಗಬೆಳ್ಳೂರು ಗ್ರಾಮದ ಕುಟೇಲು ಮುತ್ತೂರು ಸಂಪರ್ಕ ತೂಗುಸೇತುವೆಯ ವಸ್ತುಸ್ಥಿತಿಯನ್ನು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದರು.ಬಂಟ್ವಾಳ ಕ್ಷೇತ್ರದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಅವರ ಸೂಚನೆ ಮೇರೆಗೆ ಬಂಟ್ವಾಳ ಜಿಲ್ಲಾ ಪಂಚಾಯತ್
ಕಾರ್ಯಪಾಲಕ ಅಭಿಯಂತರರಾದ  ತಾರಾನಾಥ್ ಸಾಲ್ಯಾನ್ ,ಇಂಜಿನಿಯರ್ ಜಗದೀಶ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಪೂರಕ ಮಾಹಿತಿ‌ಪಡೆದರು.


ಕುಟೇಲು ಮುತ್ತೂರು ಸಂಪರ್ಕ ತೂಗುಸೇತುವೆಯ ಸುತ್ತ ಪೊದೆಗಳು ಬೆಳೆದಿದಲ್ಲದೆ  ಸೇತುವೆಯ ಕಬ್ಬಿಣಕ್ಕು ತುಕ್ಕು ಹಿಡಿದಿದ್ದು,ಈ ತೂಗುಸೇತುವೆಯಲ್ಲಿ ನಡೆದಾಡುವ ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಫಲಕವನ್ನು ಅಳವಡಿಸಿದ್ದಾರೆ.
ತೂಗು ಸೇತುವೆಯ ವಸ್ತು ಸ್ಥಿತಿ ಪರಿಶೀಲಿಸುವಂತೆ ಶಾಸಕ ರಾಜೇಶ್  ನಾಯಕ್ ಅವರು ಸೂಚಿಸಿದ ಹಿನ್ನಲೆಯಲ್ಲಿ
ಇಂಜಿನಿಯರ್ ಗಳ ತಂಡ ಪರಿಶೀಲಿಸಿದ್ದಾರೆ.
.ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದೇವಪ್ಪ ಪೂಜಾರಿ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಕಾಶ್ ಆಳ್ವ , ಸತೀಶ್ ಆಳ್ವ, ಬಾಲಕೃಷ್ಣ ಶೆಟ್ಟಿ ಗುಂಡಾಲ ರೀತೇಶ ಶೆಟ್ಟಿ  , ಜಗನ್ನಾಥ ಕುಲಾಲ್, ನಾಸೀರ್,ಸಿಯಾಬ್ ಮೂಲರಪಟ್ನ ಮುಂತಾದ ಪ್ರಮುಖರು ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *