ಕೈಕಂಬ: ಕಿನ್ನಿಕಂಬಳ ರೋಸಾ ಮಿಸ್ತಿಕಾ ಪ್ರೌಢಶಾಲೆಯ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲದ ರಚನೆ ಮತ್ತು ಪ್ರತಿಜ್ಞಾ ಸ್ವೀಕಾರ ಶಾಲಾ ಸಭಾಂಗಣದಲ್ಲಿ ಜರಗಿತು.
ಶಾಲಾ ನಾಯಕನಾಗಿ ಹರಿಕೃಷ್ಣ, ಶಾಲಾ ಉಪ ನಾಯಕಿಯಾಗಿ ವರ್ಷ, ವಿಪಕ್ಷ ನಾಯಕಿಯಾಗಿ ಭವಿಷ್ಯ, ಸಭಾಪತಿಯಾಗಿ ದೀಕ್ಷಿತ್, ಕಾರ್ಯದರ್ಶಿಯಾಗಿ ಫಾತಿಮಾ ರಿಝ ಆಯ್ಕೆಯಾದರು.

ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕಿ ಭಗಿನಿ ರೋಜ್ ಲಿಟಾ, ಗುರುಪುರ ಪಂಚಾಯತಿನ ಪಿ.ಡಿ.ಓ ಶ್ರೀಮತಿ ಪಂಕಜ ಶೆಟ್ಟಿ,ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲಯನ್ ಜೆಫ್ರಿ ಯಾನ್ ತಾವ್ರೊ, ರೋಸಾ ಮಿಸ್ತಿಕಾ ಪಿ. ಯು ಕಾಲೇಜಿನ ಪ್ರಾಂಶುಪಾಲೆ ಭಗಿನಿ ಅನಿತ ಲಿಡಿಯಾ , ಉಪಸ್ಥಿತರಿದ್ದರು

ಪ್ರಾರ್ಥನೆ ಹಾಗೂ ಸ್ವಾಗತದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರ ಶಾಲಾ ಸಂಸತ್ತಿನ ಉದ್ದೇಶ ಮತ್ತು ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜವಾಬ್ದಾರಿತನ, ಶಿಸ್ತು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಪ್ರಮುಖ ವೇದಿಕೆಯಾಗಿದೆ ಎಂದು ಶಾಲಾ ಸಂಚಾಲಕರು ಸಲಹೆ ನೀಡಿದರು

ಈ ಸಂದರ್ಭದಲ್ಲಿ ಶಾಲಾ ನಾಯಕ, ಉಪನಾಯಕ ಹಾಗೂ ವಿವಿಧ ಸಚಿವ ಸಂಪುಟಗಳ ಪ್ರತಿನಿಧಿಗಳಿಗೆ ಬ್ಯಾಡ್ಜ್ ಧರಿಸಿ ಅಧಿಕಾರ ವಹಿಸಲಾಯಿತು. ನೂತನವಾಗಿ ಆಯ್ಕೆಯಾದ ಸಂಸತ್ ಸದಸ್ಯರು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.

ಶಾಲಾ ಮಂತ್ರಿಮಂಡಲದ ರಾಜ್ಯಪಾಲರ ಸ್ಥಾನದಲ್ಲಿರುವ ಶಾಲಾ ಮುಖ್ಯಸ್ಥರು ತಮ್ಮ ಸಂದೇಶದಲ್ಲಿ, “ಶಾಲಾ ಸಂಸತ್ತು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಿದ್ದು, ಭವಿಷ್ಯದ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ” ಎಂದು ಹೇಳಿದರು.
ಶಾಲಾ ಮುಖ್ಯಸ್ಥೆ ಭಗಿನಿ ಮರಿಸ್ಸಾ ಲೂಸಿ ಮಂತ್ರಿಮಂಡಲದ ಎಲ್ಲಾ ಸದಸ್ಯರಿಗೆ ಪ್ರಮಾಣವಚನ ವಾಚಿಸಿದರು
ಇಡೀ ಕಾರ್ಯಕ್ರಮದ ಜವಾಬ್ದಾರಿಯನ್ನು ದೈಹಿಕ ಶಿಕ್ಷಣ ಶಿಕ್ಷಕ ಲ್ಯಾನ್ಸಿ ಸಿಕ್ವೇರಾ ರವರುವಹಿಸಿ ನಿರೂಪಣೆ ಮಾಡಿದರು ಶಿಕ್ಷಕ ಪ್ರವೀಣ್ ಕುಟಿನ್ಹಾ ಸ್ವಾಗತಿಸಿದರು ಶಿಕ್ಷಕಿ ಬಿಂದಿಯಾರವರು ಧನ್ಯವಾದಗೈದರು
