ಪೊಳಲಿ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಶ್ರೀ ದುರ್ಗಾ ನಮಸ್ಕಾರ ಪೂಜೆ ಜೂ.21ರಂದು ಭಾನುವಾರ ರಾತ್ರಿ ಜರಗಿತು.ಶ್ರೀ ಕ್ಷೇತ್ರ ಪೊಳಲಿಯ ಪ್ರಧಾನ ಅರ್ಚಕರಾದ ಅನಂತ ಭಟ್ ಪೂಜೆ ನೆರವೇರಿಸಿದರು.

ರಾಮಕೃಷ್ಣ ತಪೋವನದ ಅಧ್ಯಕ್ಷರಾದ ಸ್ವಾಮಿವಿವೇಕ ಚೈತನ್ಯಾನಂದ ಅವರು ಮನುಕುಲದ ಶೇಯೋಭಿವೃದ್ಧಿಗಾಗಿ ಶ್ರೀ ದುರ್ಗಾದೇವಿಗೆ ಪೂಜೆ ನೆರವೇರಿಸಿದರು. ಈ ಸಂದೃಭದಲ್ಲಿ ರಾಮಕೃಷ್ಣರ ಭಕ್ತಾಧಿಗಳು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
