ಕೈಕಂಬ : ಜೂನ್ 12,ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯು ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರ ರವರ ಅಧ್ಯಕ್ಷತೆಯಲ್ಲಿ ಚೊಕ್ಕಬೆಟ್ಟು ಪಕ್ಷದ ಕಛೇರಿಯಲ್ಲಿ ನಡೆಯಿತು

ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ವಿಧ್ಯಾಮಾನವನ್ನು ವಿವರಿಸಿ ಮುಂಬರು 2028ರ ವಿಧಾನಸಭಾ ಚುನಾವಣೆಗೆ ಬೇಕಾದಂತಹ ಪೂರ್ವ ತಯಾರಿಯನ್ನು ಮಾಡಬೇಕೆಂದು ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಕರೆ ನೀಡಿದರು.
ಮುಂಬರುವ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ವಿಷಯವಾಗಿ ಚರ್ಚಿಸಿ ಎಲ್ಲಾ ವಾರ್ಡ್ ಗಳಲ್ಲಿ ಸ್ಪರ್ಧಿಸಲು ತಯಾರಾಗಬೇಕೆಂದು ಮಂಗಳೂರು ನಗರ ಜಿಲ್ಲಾ ಕಾರ್ಯಾಧ್ಯಕ್ಷರಾದ ಅಶ್ರಫ್ ಅಡ್ಡೂರು ರವರು ತಿಳಿಸಿದರು..
ಈ ಸಂಧರ್ಭದಲ್ಲಿ ಮಂಗಳೂರು ನಗರ ಜಿಲ್ಲಾ ಸಮಿತಿ ಸದಸ್ಯ ನೂರುಲ್ಲಾ ಕುಳಾಯಿ, ಕ್ಷೇತ್ರ ಜೊತೆ ಕಾರ್ಯದರ್ಶಿ ಫಯಾಝ್ ಕಾಟಿಪಳ್ಳ, ಕ್ಷೇತ್ರ ಕೋಶಾಧಿಕಾರಿ ಆಕಿಬ್ ವಾಮಂಜೂರ್, ಸುರತ್ಕಲ್ ಬ್ಲಾಕ್ ಅಧ್ಯಕ್ಷ ನೌಶಾದ್ ಚೊಕ್ಕಬೆಟ್ಟು, ಕಾರ್ಯದರ್ಶಿ ಅಫೀರ್ ಚೊಕ್ಕಬೆಟ್ಟು ಉಪಸ್ಥಿತರಿದ್ದರು.
