ಶಿಮ್ಲಾ: ಕಾಡಿನಿಂದ ನಾಡಿಗೆ ಬರುವ ಮಂಗ ಕಪಿಚೇಷ್ಠೆ ಮಾಡಿಕೊಂಡು ಎಲ್ಲರಿಗೂ ಉಪದ್ರವ ನೀಡುವುದು ಸಾಮಾನ್ಯ. ಆದರೆ ಶಿಮ್ಲಾದ ಲೋವರ್ ಬಜಾರ್ ನಲ್ಲಿ ಕಾಣಿಸಿಕೊಂಡ ಮಂಗ ಹಣದ ಮಳೆಗರೆಯುವ ಮೂಲಕ ಜನರನ್ನು ಅಚ್ಚರಿಗೀಡು ಮಾಡಿದ್ದಾನೆ. ಬೆಳಗ್ಗಿನ 8.30ರ ಹೊತ್ತಿಗೆ ಲೋವರ್ ಬಜಾರ್ ನಲ್ಲಿ ಕೆಲಸಕ್ಕೆ ಹೋಗುವವರು, ಅಂಗಡಿ ಮಾಲಕರು ಮತ್ತು ನೌಕರರು ತಮ್ಮತಮ್ಮ ಕಾರ್ಯಗಳಲ್ಲಿ ತೊಡಗಿದ್ದ ಸಮಯ ಎಲ್ಲಿಂದಲೋ ಒಂದು ಮಂಗ ಪ್ರತ್ಯಕ್ಷವಾಯಿತು. ಕೈಯಲ್ಲಿ ಬ್ಯಾಗೊಂದನ್ನು ಹಿಡಿದಿದ್ದ ಮಂಗನ ಬಗ್ಗೆ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದ ಜನರು ಗಮನಹರಿಸಲು ಹೋಗಲಿಲ್ಲ.

monkey

 

ಆದರೆ ಬ್ಯಾಗನ್ನು ತೆರೆದ ಮಂಗ ಅದರೊಳಗಿದ್ದ 100 ಮತ್ತು 500ರ ನೋಟುಗಳನ್ನು ಒಂದೊಂದಾಗಿ ಕೆಳಗೆ ಬಿಸಾಡಲು ಆರಂಭಿಸಿದಾಗ ನೆರೆದಿದ್ದ ಜನರ ಪ್ರಜ್ಞೆ ಹೋಗುವುದೊಂದೇ ಬಾಕಿ. ಮಂಗ ಎಸೆಯುತ್ತಿದ್ದ ನೋಟುಗಳನ್ನು ಹಿಡಿಯಲು ಜನರು ದುಂಬಾಲು ಬಿದ್ದರು. ಈ ನಡುವೆ ಕೆಲವು ಚಾಣಾಕ್ಷರು ಮಂಗನನ್ನೇ ಹಿಡಿಯಲು ಮುಂದಾದರು. ಆದರೆ ಮಂಗನೇನು ಕಡಿಮೆಯೇ ಅದು ಒಂದು ಕಟ್ಟಡದಿಂದ ಮತ್ತೊಂದಕ್ಕೆ ಜಿಗಿಯುತ್ತಾ ಹೋದಲ್ಲೆಲ್ಲಾ ಹಣದ ಮಳೆ ಹರಿಸಿತು. ಇದರಿಂದ ರಾಮ್ ಬಜಾರ್, ಗಂಜ್ ಬಜಾರ್ ಮುಂತಾದ ಪ್ರದೇಶಗಳಲ್ಲೂ ನೋಟುಗಳು ಬಿದ್ದವು. ಸುಮಾರು ಅರ್ಧ ಗಂಟೆಗಳ ಕಾಲ ಹಣದ ಮಳೆಗರೆದ ಮಂಗ ನಂತರ ಮಾಯವಾಯಿತು. ಮಂಗ ಎಷ್ಟು ಹಣವನ್ನು ಈ ರೀತಿ ಎಸೆದಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಈ ವೇಳೆ ಜನರು ಹಣವನ್ನು ಸಂಗ್ರಹಿಸುವುದರಲ್ಲಿ ಎಷ್ಡು ಬ್ಯುಸಿಯಾಗಿದ್ದರೆಂದರೆ ಮಂಗನ ಒಂದು ಫೋಟೊ ತೆಗೆಯಲೂ ಕೂಡಾ ಯಾರ ಬಳಿಯೂ ಪುರುಸೋತ್ತು ಇರಲಿಲ್ಲ.

By suddi9

Leave a Reply

Your email address will not be published. Required fields are marked *