sunny

ಸನ್ನಿ ಲಿಯೋನ್ ಮೇಲೆ ಮುಗಿಬಿದ್ದ ರಿಕ್ಷಾವಾಲಾಗಳು
ಮುಂಬೈ; ಚಿತ್ರ ನಟಿಯರ ಮೇಲೆ ಮೋಹವಿರದವರು ಯಾರಿದ್ದಾರೆ. ಅದರಲ್ಲೂ ಬಾಲಿವುಡ್ನ ಬಿಚ್ಚಮ್ಮಗಳು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಜನಸಾಮಾನ್ಯರು ಅವರ ಮೇಲೆ ಮುಗಿಬೀಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಮುಂಬೈಯಲ್ಲಿ ತನ್ನ ಚಿತ್ರದ ಪ್ರಮೋಶನ್ ವೇಳೆ ನಟಿ ಹಾಗೂ ಮಾಜಿ ನೀಲಿ ಚಿತ್ರತಾರೆ ಸನ್ನಿ ಲಿಯೋನಿ ಮೇಲೆ ಮುಗಿಬಿದ್ದ ರಿಕ್ಷಾವಾಲಾಗಳು ಆಕೆಯ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆ ನಡೆದಿದೆ.
‘ರಾಗಿಣಿ ಎಂಎಂಎಸ್2’ ಚಿತ್ರದ ಪ್ರಮೋಶನ್ನನ್ನು ರಿಕ್ಷಾಗಳಲ್ಲಿ ನಡೆಸಲು ಚಿತ್ರತಂಡ ಯೋಚಿಸಿತ್ತು. ಅದರಂತೆ ಚಿತ್ರದ ನಾಯಕಿ ಸನ್ನಿ ಲಿಯೋನಿ ರಿಕ್ಷಾ ಹತ್ತಿ ಚಿತ್ರದ ಪ್ರಮೋಶನ್ ಕಾರ್ಯದಲ್ಲಿ ತೊಡಗಿದ್ದಳು. ಈಕೆಯನ್ನು ನೋಡಲು ಜನರ ದಂಡೇ ಸ್ಥಳದಲ್ಲಿ ನೆರೆದಿತ್ತು. ಆದರೆ ಸ್ವಲ್ಪ ಹೊತ್ತಲ್ಲೇ ತಮ್ಮ ಮೇಲಿನ ನಿಯಂತ್ರಣವನ್ನು ಕಳೆದುಕೊಂಡ ರಿಕ್ಷಾವಾಲಾಗಳು ಸನ್ನಿ ಮೇಲೆ ಕೈಹಾಕಲು ಪ್ರಾರಂಭಿಸಿದರು. ಇದರಿಂದ ಗಾಬರಿಗೊಂಡ ಸನ್ನಿ ಸ್ಥಳದಿಂದ ಪಾರಾಗಲು ಮುಂದಾದಳು ಆದರೆ ಜನಸಮೂಹದಿಂದ ಸುತ್ತುವರಿದಿದ್ದ ಆಕೆಗೆ ಸುರಕ್ಷಿತವಾಗಿ ಹೊರನಡೆಯಲು ಜಾಗವೇ ಸಿಗಲಿಲ್ಲ. ಅಂತಿಮವಾಗಿ ಚಿತ್ರತಂಡ ಪೊಲೀಸರಿಗೆ ಕರೆ ಮಾಡಿ ಪರಿಸ್ಥಿತಿ ನಿಯಂತ್ರಿಸಲು ಮನವಿ ಮಾಡಿತು. ಘಟನೆಯ ನಂತರ ಚಿತ್ರತಂಡ ತನ್ನ ರಿಕ್ಷಾ ಪ್ರಮೋಶನ್ ಯೋಜನೆನ್ನು ಕೈಬಿಟ್ಟಿದೆಯಂತೆ.

 

By suddi9

Leave a Reply

Your email address will not be published. Required fields are marked *