ಗುರುಪುರ : ಕಳೆದ ೩೨ ವರ್ಷಗಳಿಂದ ರೋಹನ್ ಕಾರ್ಪೊರೇಶನ್ ಭಾರತದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ವಿಶ್ವಾಸಾರ್ಹ ಹಾಗೂ ವಿನೂತನ-ಉತ್ಕೃಷ್ಟ ಪ್ರಯೋಗಗಳೊಂದಿಗೆ ಬೆಳೆಯುತ್ತಿದ್ದು, ಭಾರತದ ಪ್ರಪ್ರಥಮ ಸಂಪೂರ್ಣ ಬೀಚ್ ಫೇಸಿಂಗ್(ಕಡಲ ಕಿನಾರೆ ಅನಾವರಣ) ಐಶಾರಾಮಿ, ಗಗನಚುಂಬಿ `ರೋಹನ್ ಮರೀನಾ ಒನ್’ ಅವಳಿ ಟವರ್ ನಿರ್ಮಾಣಕ್ಕೆ ಸುರತ್ಕಲ್ ಎನ್ಐಟಿಕೆ ಕಡಲ ಕಿನಾರೆಯಲ್ಲಿ ವೇದಿಕೆ ಸಿದ್ಧಗೊಂಡಿದೆ.

ಮಂಗಳೂರಿನಲ್ಲಿ ಸೆ. ೯ರಂದು ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಾಜೆಕ್ಟ್ ಅನಾವರಣಗೊಳಿಸಿದ ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಜನರಿಗೆ ಗುಣಮಟ್ಟದ ವಸತಿ ಮತ್ತು ವಾಣಿಜ್ಯ ಯೋಜನೆ ತಲುಪಿಸುವ ಪ್ರಕ್ರಿಯೆಯಲ್ಲಿ ಡಾ. ರೋಹನ್ ಮೊಂತೆರೊ ಮುಂಚೂಣಿಯಲ್ಲಿದ್ದಾರೆ. ಮಂಗಳೂರಿನ ಪ್ರಮುಖ ಸ್ಥಳಗಳಲ್ಲಿ ೨೫ಕ್ಕೂ ಹೆಚ್ಚು ಯೋಜನೆ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಹೆಗ್ಗಳಿಕೆ ಇವರಿಗಿದೆ. ರೋಹನ್ ಕಾರ್ಪೊರೇಶನ್ ಯೋಜನೆಗಳು ಬೆಂಗಳೂರು, ಮುಂಬೈಯಂತಹ ದೊಡ್ಡ ನಗರಗಳಿಗೆ ವಿಸ್ತರಣೆಗೊಳ್ಳಬೇಕು. ದೇಶದ ಎಲ್ಲೆಡೆ ದೀರ್ಘ ಬಾಳಿಕೆ ಹಾಗೂ ವಿಶ್ವಾರ್ಹತೆಯ ಯೋಜನೆಗಳು ಬರಬೇಕು ಎಂದು ಆಶಿಸಿದರು.
ಒಟ್ಟು ೮.೨ ಎಕ್ರೆ ಜಾಗದಲ್ಲಿ ತಲೆ ಎತ್ತಲಿರುವ ೪೩೩ ಅಲ್ಟಾç ಅಪಾರ್ಟ್ಮೆಂಟ್ ಹೊಂದಿರುವ ವಿಶಿಷ್ಟ ವಿನ್ಯಾಸದ ಕಟ್ಟಡ ನಿಮಾಣಗೊಳ್ಳಲಿದೆ. ಇದರಲ್ಲಿ ೩೯ ಅಂತಸ್ತಿನ ದಿ ರಿಟ್ರೀಟ್' ಮತ್ತು ೪೭ ಅಂತಸ್ತಿನದಿ ರಿಸಾರ್ಟ್’ ಎಂಬ ೨ ಟವರ್ಗಳಿವೆ. ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಇದು ಹೊಸ ಮೈಲಿಗಲ್ಲಾಗಲಿದೆ ಎಂದು ರೋಹನ್ ಕಾರ್ಪೊರೇಶನ್ನ ಮುಖ್ಯಸ್ಥ ಡಾ. ರೋಹನ್ ಮೊಂತೆರೊ ಹೇಳಿದರು.
“ರೋಹನ್ ಮರಿನಾ ಒನ್ ನಮ್ಮ ಕನಸಿನ ಯೋಜನೆ. ಕರಾವಳಿಗರ ಜೀವನಕ್ಕೆ ಹೊಸ ಅರ್ಥ ನೀಡಬಲ್ಲ ಯೋಜನೆ ಇದಾಗಿದೆ. ಟವರ್ನ ಪ್ರತಿಯೊಂದು ಅಪಾರ್ಟ್ಮೆಂಟ್ನಿಂದಲೂ ಸುತ್ತಲ ಕಡಲ ಸೌಂದರ್ಯ ಆಸ್ವಾದಿಸಲು ಅವಕಾಶವಿದೆ. ಇಂತಹ ಅವಕಾಶ ದೇಶದಲ್ಲೇ ಪ್ರಥಮ.
ಇಲ್ಲಿ ಮನೆ ಮಾಡುವ ಪ್ರತಿಯೊಬ್ಬರ ಪ್ರತಿದಿನದ ಜೀವನ ಪ್ರಕೃತಿಯ ಅದ್ಭುತ ದೃಶ್ಯಗಳೊಂದಿಗೆ ಆರಂಭವಾಗಲಿದೆ. ಮಂಗಳೂರು ನಗರಕ್ಕೆ ನಾವು ನೀಡುವ ಗೌರವ ಮತ್ತು ನಮ್ಮ ಕರಾವಳಿಯ ವಿಶಿಷ್ಟತೆ ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ ಇದಾಗಿದೆ. ಮುಂದೆ ಬೆಂಗಳೂರು, ಮುಂಬೈ ಮತ್ತು ಗೋವಾಕ್ಕೂ ಕಾರ್ಪೊರೇಶನ್ ವಿಸ್ತರಣೆಯಾಗಲಿದೆ. ಮಂಗಳೂರು ನಗರಕ್ಕೆ ನಾವು ನೀಡುವ ಗೌರವ ಹಾಗೂ ವಿಶ್ವಕ್ಕೆ ಮಂಗಳೂರು ಕರಾವಳಿಯನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ” ಎಂದು ಡಾ. ಮೊಂತೊರೊ ವಿವರಿಸಿದರು.
ರೋಹನ್ ಮರೀನಾ ಒನ್ ಕೇವಲ ಸಮುದ್ರದ ನೋಟ ಮತ್ತು ಐಶಾರಾಮಿ ಬದುಕನ್ನಷ್ಟೇ ಖಾತ್ರಿಪಡಿಸುವುದಿಲ್ಲ. ದೈನಂದಿನ ಜೀವನಕ್ಕೆ ಒಂದು ಸುಂದರ ಅನುಭವ ನೀಡುವಂತಹ ೮೩ ಉತ್ಕೃಷ್ಟ ಗುಣಮಟ್ಟದ ಸೇವೆಗಳು ಟವರ್ಗಳಲ್ಲಿ ಲಭ್ಯವಿವೆ. ದಿ ರಿಟ್ರೀಟ್ನ ೩೯ ಅಂತಸ್ತುಗಳಲ್ಲಿ ೨, ೩ ಮತ್ತು ೪ ಬಿಎಚ್ ಕೆ ಅಪಾರ್ಟ್ಮೆಂಟ್ಗಳು ಹೊಂದಿದ್ದು, ಪ್ರತಿಯೊಂದು ಮನೆಯೂ ಆಧುನಿಕ ಸೌಲಭ್ಯ ಹೊಂದಿರುತ್ತದೆ. ವಿಶಾಲ ಕಿಟಕಿಗಳು ಮತ್ತು ಬಾಲ್ಕನಿಗಳಿಂದ ಸಮುದ್ರದ ಪ್ರಶಾಂತ ಅಲೆಗಳ ದೃಶ್ಯ ಸವಿಯಲು ಅವಕಾಶವಿದೆ. ಮೇಲ್ಮಹಡಿಯಲ್ಲಿರುವ ವಿಶಿಷ್ಟ ಇನ್ಫಿನಿಟಿ ಎಡ್ಜ್ ಸ್ವಿಮ್ಮಿಂಗ್ ಪೂಲ್ ವಿಶ್ರಾಂತಿಯ ಅನುಭವ ನೀಡಲಿದೆ. ೪೭ ಅಂತಸ್ತಿನ `ದಿ ರಿಸಾರ್ಟ್’ನ ಟವರ್ ಭಾರತದ ಅತ್ಯಂತ ಐಶಾರಾಮಿ ಟವರ್ಗಳಲ್ಲಿ ಒಂದಾಗಿದೆ. ಇದರಲ್ಲಿ ೨ ಮತ್ತು ೩ ಬಿಎಚ್ಕೆ ಅಪಾರ್ಟ್ಮೆಂಟ್ಗಳ ಜೊತೆಗೆ ವಾಣಿಜ್ಯ ಅವಕಾಶಗಳಿವೆ. ಸುದ್ದಿಗೋಷ್ಠಿಯಲ್ಲಿ ರೋಹನ್ ಪುತ್ರ ಕಾರ್ಪೊರೇಶನ್ ನಿರ್ದೇಶಕ ಡಿಯೋನ್ ಮೊಂತೊರೊ ಮತ್ತು ಜನರಲ್ ಮ್ಯಾನೇಜರ್ ಸುಮನಾ ಇದ್ದರು
