ನವದೆಹಲಿ: ಇರಾಕ್ನ ಅತಿ ಕ್ರೂರಿ ಹಾಗೂ ನಿರ್ದಯಿ ಸಂಘಟನೆಯಾಗಿರುವ ಐಸಿಸ್ ಟ್ವಿಟರ್ ಖಾತೆಯನ್ನು ಬೆಂಗಳೂರಿನ ವ್ಯಕ್ತಿಯೋರ್ವ ನಿರ್ವಹಿಸುತ್ತಿದ್ದಾನೆಂಬ ಆತಂಕಕಾರಿ ವಿಷಯವನ್ನು ಬ್ರಿಟನಿನ ಚಾನೆಲ್4ಡಾಟ್ಕಾಂ ಬಹಿರಂಗಪಡಿಸಿದೆ. ಟ್ವಿಟರ್ ಖಾತೆಯಲ್ಲಿ ಐಸಿಸ್ ಗೆ ಸೇರುವಂತೆ ಒತ್ತಾಯಿಸುತ್ತಿದ್ದನ್ನಲ್ಲದೆ, ಇಸ್ಲಾಮಿಕ್ ರಾಜಯ ನಿರ್ಮಾಣ ಮಾಡುವ ಕನಸುಗಳನ್ನು ಬಿತ್ತುತ್ತಿದ್ದ ಎಂಬ ಅಂಶ ಬಹಿರಂಗವಾಗಿದೆ. ಎಂ.ಎನ್.ಸಿ ಉದ್ಯೋಗಿಯಾಗಿರುವ ಮೆಹದಿ ಎಂಬಾತ ಇಸೀಸ್ ನ ಟ್ವಿಟರ್ ಖಾತೆಯನ್ನು ನಿರ್ವಹಿಸುತ್ತಿದ್ದಾನೆ ಎಂದು ತನಿಖಾದಳ ತಿಳಿಸಿದೆ.

shamiwitness

shamiwitness2
ಶಮಿ ವಿಟ್ನೆಸ್ ಎಂಬ ಹೆಸರಿನ ಟ್ವಿಟರ್ ಖಾತೆ ಇದಾಗಿದ್ದು, ಮೆಹದಿ ಇದನ್ನು ನಿರ್ವಹಿಸುತ್ತಿದ್ದಾನೆ. ಐಸಿಸ್ ಸೇರಲು ಹವಣಿಸುತ್ತಿರುವ ಈತ ಇಸ್ಲಾಂ ರಾಜ್ಯದ ಕನಸು ಕಾಣುತ್ತಿದ್ದ. ಅಲ್ಲದೆ ಇತರರಿಗೂ ಐಸಿಸ್ ಸೇರಲು ಪದೇಪದೇ ಪ್ರೇರೇಪಿಸುತ್ತಿದ್ದನ್ನಲ್ಲದೆ, ಜಿಹಾದ್ನಿಂದ ಸತ್ತರೆ ನೀವು ಹುತಾತ್ಮರಾಗುತ್ತೀರಿ ಎಂದು ಹೇಳುತ್ತಿದ್ದ. ಈತನ ಖಾತೆಗೆ 17,000 ಅನುಯಾಯಿಗಳಿದ್ದು ತಿಂಗಳಿಗೆ 2 ಮಿಲಿಯನ್ ಜನರು ಅದನ್ನು ವೀಕ್ಷಿಸುತ್ತಿದ್ದರು ಎಂದು ಸುದ್ದಿವಾಹಿನಿ ಹೇಳಿದೆ.
ಮೆಹದಿಯ ಪೂರ್ಣ ಹೆಸರು ಇನ್ನಷ್ಟೇ ಬಹಿರಂಗವಾಗಬೇಕಿದ್ದು, ರಾಷ್ಟ್ರೀಯ ತನಿಖಾ ದಳದ ಸಿಬ್ಬಂದಿ ಈಗಾಗಲೇ ಬೆಂಗಳೂರಿಗೆ ತಲುಪಿದ್ದು, ತನಿಖೆ ಕೈಕೊಂಡಿದ್ದಾರೆ. ಇವರಿಗೆ ಬೆಂಗಳೂರಿನ ಪೊಲಿಸ್ ಆಯುಕ್ತರು ಸಾಥ್ ನೀಡಿದ್ದು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿಲ್ಲ.

By suddi9

Leave a Reply

Your email address will not be published. Required fields are marked *