ಕೈಕಂಬ: ಇಷ್ಟೊಂದು ಸಣ್ಣ ಗ್ರಾಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶ ಪಸರಿಸಲು ಯೋಗ್ಯವೆನಿಸಿರುವ `ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ’ ನಿರ್ಮಿಸಿದ್ದೀರಿ. ಇಲ್ಲಿಗೆ ದೇವರು ಬಂದಿಲ್ಲ, ಸರ್ಕಾರ ಬಂದಿಲ್ಲ. ಆದರೆ ನಿಮ್ಮೆಲ್ಲರ ಪ್ರಯತ್ನದ ಫಲವಾಗಿ ಈ ಸುಂದರ ಕಾರ್ಯಕ್ರಮ ನಡೆಯುತ್ತಿದೆ. ಸಮಾಜದಲ್ಲಿ ಮಹಿಳೆಯರಿಗೆ ದೇವರ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಸಾಧ್ಯವಾಗಿರುವ ಆ ಕೆಲಸ ಇತರೆಡೆಯೂ ಆಗಬೇಕು ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಆಶಿಸಿದರು.

ಗುರುಪುರದ ಗುರುನಗರದ ಬಿಲ್ಲವ ಸಮಾಜ ಸೇವಾ ಸಂಘ(ರಿ) ಮತ್ತು ಸ್ಫೂರ್ತಿ ಬಿಲ್ಲವ ಮಹಿಳಾ ಘಟಕ ಮೇ. ೪ರಂದು ಆಯೋಜಿಸಿದ ನೂತನ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು. ಪದ್ಮಶ್ರೀ ಪುರಸ್ಕೃತ ಶಿವಗಿರಿ ಮಠದ ಶ್ರೀ ವಿಶುದ್ಧಾನಂದ ಸ್ವಾಮೀಜಿ ಆಶಿರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅವರು ಮಾತನಾಡಿ, ನಾನಿರಲಿ ಅಥವಾÁ್ಮಜಿ ಶಾಸಕ ಮೊÊದಿನ್ ಬಾವಾ ಇರಲಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ತಂದಿದ್ದರೆ ಅದು ನಿಮಿತ್ತ ಮಾತ್ರ. ಅದರ ಹಿಂದಿನ ಶಕ್ತಿಗಳಾದ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರ ಶ್ರಮ, ಬಿಲ್ಲವ ಸಮುದಾಯದ ಪರೋಕ್ಷ ಬೆಂಬಲ ಮರೆಯಲು ಸಾಧ್ಯವಿಲ್ಲ. ನಾರಾಯಣ ಗುರುಗಳ ಸಂದೇಶದAತೆ ಭವಿಷ್ಯದಲ್ಲಿ ಭವನವು ಶ್ರದ್ಧಾ ಕೇಂದ್ರವಾಗಿ ಬೆಳೆಯಲಿ. ಅಗತ್ಯವಿರುವ ಕೆಲಸಗಳಿಗೆ ಸರ್ಕಾರದ ಅನುದಾನಕ್ಕೆ ಪ್ರಯತ್ನಿಸುವೆ. ಒಂದು ಧರ್ಮಕ್ಕೆ ಅಪಾಯ ಎದುರಾದಾಗ ರಾಮ, ಕೃಷ್ಣರಂತಹ ದೇವರು, ಅವಧೂತರು ಹುಟ್ಟಿಕೊಳ್ಳುತ್ತಾರೆ. ನಾರಾಯಣ ಗುರುಗಳು ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಹುಟ್ಟಿದ ಒಬ್ಬ ಅವಧೂತ ಎಂದರು.

ಶ್ರೀ ಕ್ಷೇತ್ರ ಕದ್ರೋಳಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಸರ್ವರೂ ಒಪ್ಪಿಕೊಳ್ಳುವ ತತ್ವ ಸಂದೇಶ ಸಾರಿರುವ ನಾರಾಯಣ ಗುರುಗಳು ಜಗತ್ತಿಗೆ ಪರಿಚಿತ ಮಹಾನ್ ಪುರುಷ. ಹಿಂದುಳಿದವರಿಗೆ ದೇವಾಲಯಗಳ ಪ್ರವೇಶ ನಿಷಿದ್ಧವಾಗಿದ್ದ ಒಂದು ಕಾಲದಲ್ಲಿ ಗುರುಗಳು ಸಂಘರ್ಷರಹಿತ ಕ್ರಾಂತಿ ನಡೆಸಿ, ಸಮಾಜದಲ್ಲಿ ಮೇಲು-ಕೀಳು ಹೋಗಲಾಡಿಸಲು ಪ್ರಯತ್ನಿಸಿದ್ದರು. ಬಿಲ್ಲವ ಸಮುದಾಯದಿಂದ ಕಷ್ಟದಲ್ಲಿರುವವರಿಗೆ ನೆರವು, ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು ಎಂದರು.

ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಎಂಎಲ್‌ಸಿಗಳಾದ ಮಂಜುನಾಥ ಭಂಡಾರಿ ಮತ್ತು ಕಿಶೋರ್ ಕುಮಾರ್, ಮಾಜಿ ಶಾಸಕ ಮೊÊದಿನ್ ಬಾವಾ, ಉದ್ಯಮಿ ಭುವನೇಶ್ ಪಚಿನಡ್ಕ ಸಂಘದ ಸಾರ್ಥಕ ಕೆಲಸಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಘ ಮತ್ತು ಸಮುದಾಯ ಭವನ ನಿರ್ಮಾಣದ ಹಿಂದೆ ಶ್ರಮ ವಹಿಸಿರುವ ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು ಹಾಗೂ ಮರಣ ಹೊಂದಿರುವ ಅಧ್ಯಕ್ಷರ ಪರವಾಗಿ ಅವರ ಕುಟುಂಬಿಕರನ್ನು ಸನ್ಮಾನಿಸಲಾಯಿತು.

ದ.ಕ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಇಂಜಿನಿಯರ್ ಶ್ರೀ ಪುರುಷೋತ್ತಮ ವಾಮಂಜೂರು, ಶ್ರೀ ಕ್ಷೇತ್ರ ಸುಂಕದಕಟ್ಟೆಯ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಧ್ರುವ ಎನ್. ಪೂಜಾರಿ, ಉದ್ಯಮಿಗಳಾದ ದೀಪಕ್ ಕೋಟ್ಯಾನ್, ಶೈಲೇಂದ್ರ ಸುವರ್ಣ, ರೋಶನ್ ಪುಂಚಮೆ, ವಿಹಿಂಪ ಗುರುಪುರ ಪ್ರಖಂಡ ಅಧ್ಯಕ್ಷ ವಿಷ್ಣು ಕಾಮತ್, ಗುರುಪುರ ಶ್ರೀ ಮುಂಡಿತ್ತಾಯ ದೈವಸ್ಥಾನದ ಮುಂಡಿತ್ತಾಯ ಪಾತ್ರಿ ಚಂದ್ರಹಾಸ ಕೌಡೂರು, ವ್ಯವಸ್ಥಾಪನಾ ಸಮಿತಿ ಸದಸ್ಯ ಪುರಂದರ ಮಲ್ಲಿ, ಪಂಚಾಯತ್ ಸದಸ್ಯರಾದ ಸುನಿಲ್ ಪೂಜಾರಿ ಜಲ್ಲಿಗುಡ್ಡೆ, ಸಚಿನ್ ಅಡಪ, ಜಿ. ಎಂ. ಉದಯ ಭಟ್, ರಾಜೇಶ್ ಸುವರ್ಣ, ನಳಿನಿ ಶೆಟ್ಟಿ, ಸಂಘದ ಪದಾಧಿಕಾರಿಗಳು, ಸದಸ್ಯರು, ಗುರು ಮಂದಿರದ ಪ್ರಧಾನ ಅರ್ಚಕ ಪ್ರಜ್ವಲ್ ಬರ್ಕೆ, ಸ್ಫೂರ್ತಿ ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ವಿನೋದಾ ಡಿ. ಅಂಚನ್ ಹಾಗೂ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಎನ್. ಎಚ್. ಪೊನ್ನೆಲ ಅವರು ಸ್ವಾಗತಿಸಿದರು. ಪತ್ರಕರ್ತ ಧನಂಜಯ ಗುರುಪುರ ವರದಿ ವಾಚಿಸಿದರು. ವಿಜೆ. ಮಧುರಾಜ್ ಗುರುಪುರ ಅವರು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *