ಬಂಟ್ವಾಳ: ನೃತ್ಯ ಅನ್ನೋದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ, ಈ ನಿಟ್ಟಿನಲ್ಲಿ ನೃತ್ಯ ಕಲಾವಿದರಿಗೆ  ಸಿಗುವಂತ ಸೌಲಭ್ಯಗಳನ್ನು ಪಡೆಯಲು ನೃತ್ಯ ಕಲಾವಿದರ  ಸಂಘಟನೆಯ ಅಗತ್ಯವಿದ್ದು, ಈ ಮೂಲಕ ನೃತ್ಯ ಕಲಾವಿದರ ಧ್ವನಿಯಾಗಿ ತಮಗೆ ನ್ಯಾಯಯುತವಾಗಿ ಸಿಗುವ ಸೌಲಭ್ಯವನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಯಕ್ಷಬೊಳ್ಳಿ ದಿನೇಶ್ ರೈ ಕಡಬ ಹೇಳಿದ್ದಾರೆ.

ಕಲ್ಲಡ್ಕ ಕೆ ಟಿ ಹೋಟೆಲ್ ಲಕ್ಷ್ಮಿ ನಿವಾಸ ಸಭಾ ಭವನದಲ್ಲಿ ದ.ಕ.ಜಿಲ್ಲಾ ನೃತ್ಯ ಕಲಾವಿದರ ಒಕ್ಕೂಟ (ರಿ )ಇದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ‌ಅವರು ಮಾತನಾಡಿದರು.ಉದ್ಯಮಿ ಕಿಶೋರ್ ಕುಮಾರ್ ಕಟ್ಟೆಮಾರು ನೃತ್ಯ ಕಲಾವಿದರ ಒಕ್ಕೂಟದ ಲಾಂಛನ ಬಿಡುಗಡೆ ಮಾಡಿ ಶುಭ ಹಾರೈಸಿದರು.


ಮಾಯಿದೆ ದೆವುಸ್ ಅನುದಾನಿತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಾನೆಟ್ ಡಿ ‘ಸೋಜ,  
ಜಿಲ್ಲಾ ರಾಜ್ಯೋತ್ಸವ  ಪ್ರಶಸ್ತಿ ಪುರಸ್ಕೃತ  ಆರ್ .ಕೆ.ಕಲಾ ಸಂಸ್ಥೆಯರಾಜೇಶ್ ವಿಟ್ಲ,ನೃತ್ಯ ನಿರ್ದೇಶಕ ರಾಜೇಶ್ ಕಣ್ಣೂರು,ಮನೀಶ್ ಶೆಟ್ಟಿ ಉಪ್ಪಿರ,ಚಲನಚಿತ್ರ ಚಿತ್ರ ನಟಿ ಶೈಲಶ್ರೀ ಮೂಲ್ಕಿ, ಮಾಡೆಲ್  ಅಖಿಲ ಪೂಜಾರಿ, ಗೊಂಬೆ ಬಳಗ ಒಕ್ಕೂಟದ ಕೋಶಾಧಿಕಾರಿ ನವೀನ್ ಕಲ್ಲಡ್ಕ,ಮುರಳಿ ಪುತ್ತೂರು,ಸಂಗಮ್ ಡಾನ್ಸ್. ಬೋಳ್ವರ್ ಪ್ರಶಾಂತ್,ನಿಶಾನಿ ಡಾನ್ಸ್ ಗ್ರೂಪ್ ದಿನೇಶ್ ಅಮೀನ್ ನರಿಕೊಂಬು, ಮೊದಲಾದವರು ಉಪಸ್ಥಿತರಿದ್ದರು.
ನೃತ್ಯ ನಿರ್ದೇಶಕ ಮೋಹನ್ ಅಲಂಕಾರು ಸ್ವಾಗತಿಸಿದರು, ಶಾರದಾ ದಾಮೋದರ ಅರತ್ತೋಳಿ ಪ್ರಸ್ತಾವನೆಗೈದರು.
ನೃತ್ಯ ಕಲಾವಿದರ ಒಕ್ಕೂಟದ ಅಧ್ಯಕ್ಷ  ವೀ. ಜಿ.ರೋಕಾರ್ಸ್ ಸ್ವಾಗತಿಸಿದರು. ನೃತ್ಯ ನಿರ್ದೇಶಕ ಚಂದ್ರೋದಯ ಕುಲಾಲ್ ವಂದಿಸಿದರು.ನೃತ್ಯ ನಿರ್ದೇಶಕ ಮಹೇಶ್ ಕುಲಾಲ್. ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *