ಅ.8 -14 ರ ವರೆಗೆ ಬಂಟ್ವಾಳದಲ್ಲಿ ಶ್ರೀಶಾರದೋತ್ಸವ,ವಾಹನ ನಿಲುಗಡೆಯಲ್ಲಿ ಬದಲಾವಣೆ
ಬಂಟ್ವಾಳ: ಶ್ರೀ ತಿರುಮಲ ವೆಂಕಟ್ರಮಣ ಸ್ವಾಮಿ ಕೃಪಾ ಶ್ರೀ ಗಣೇಶೋತ್ಸವ ಹಾಗೂ
ಶ್ರೀ ಶಾರದೋತ್ಸವ ಸಮಿತಿ ಬಂಟ್ವಾಳ ಇದರ ಆಶ್ರಯದಲ್ಲಿ ಅ.8 ರಿಂದ 14 ರ ವರೆಗೆ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ವಠಾರದಲ್ಲಿಶ್ರೀ ಶಾರದಾ ಮಹೋತ್ಸವವು ವಿವಿಧ ವೈದಿಕ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಅ. 8 ರಂದು ರಾತ್ರಿ ಗಂಟೆ 7.30 ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಶ್ರೀ ಹನುಮಂತ ದೇವಸ್ಥಾನದಿಂದ ತಂದು ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಸ್ಥಾಪಿಸಲಾಗುವುದು,ಅ.9 ರಂದು ಬೆಳಿಗ್ಗೆ 10 ಗಂಟೆಗೆ ಪ್ರತಿಷ್ಠಾಪನೆ ಬಳಿಕ ಅ.13 ರವರೆಗೆ ವಿಶೇಷ ಆಹ್ವಾನಿತ ಭಜನಾ ಕಲಾವಿದರಿಂದ ಹಾಗೂ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ,ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಅ.13 ರಂದು ಶ್ರೀ ದೇವಿಗೆ ವಿಶೇಷ ಶ್ರೀ ಮಹಾಕಾಳಿ ರೂಪ ಅಲಂಕಾರ ,ಅ.14 ರಂದು ರಾತ್ರಿ ಶಾರದಾ ಮಾತೆಯ ಭವ್ಯ ಶೋಭಯಾತ್ರೆಯು ಜರುಗಲಿದೆ ಎಂದು ಸಮಿತಿತ ಪ್ರಕಟಣೆ ತಿಳಿಸಿದೆ
ವಾಹನ ನಿಲುಗಡೆ:
ಶ್ರೀ ಶಾರದಾ ಮಾತೆಯ ಶೋಭಾಯಾತ್ರೆಯ ಪ್ರಯುಕ್ತ ಅ. 14 ಸೋಮವಾರದಂದು
ಆಗಮಿಸುವ ಭಕ್ತಾದಿಗಳಿಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ
* ಪಾಣೆಮಂಗಳೂರು ,ಕಲ್ಲಡ್ಕ ಮಂಗಳೂರು ಕಡೆಯಿಂದ ಬರುವವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಬದಿಯ ಜಾಗದಲ್ಲಿ ಹಾಗೂ ದ್ವಿಚಕ್ರವಾಹನ ಸವಾರರು ಶ್ರೀ ದೇವಳದ ಸಮೀಪ ಇರುವ ಎಸ್ ವಿ ಎಸ್ ದೇವಳದ ವಿದ್ಯಾ ಸಂಸ್ಥೆಯ ವಠಾರದಲ್ಲಿ ನಿಲ್ಲಿಸುವಂತೆ ಕೋರಲಾಗಿದೆ
* ಮೂಡುಬಿದಿರೆ, ಸಿದ್ಧಕಟ್ಟೆ,ಬೈಪಾಸ್ ಕಡೆಯಿಂದ ಬರುವ ವಾಹನಗಳು ಬಂಟ್ವಾಳ ಪೇಟೆಗೆ ಬರುವ ದಾರಿಯ ಕೊಟ್ರಮನಗಂಡಿಯ ದೇವರ ಕಟ್ಟೆಯ ಬಸ್ ನಿಲ್ದಾಣದಲ್ಲಿ ಹಾಗೂ ಅದರ ಎದುರು ಇರುವ ವಿಶಾಲ ಮೈದಾನದಲ್ಲಿ ನಿಲುಗಡೆಗೊಳಿಸುವಂತೆ ಕೋರಲಾಗಿದೆ.
* ಪುಂಜಾಲ್ ಕಟ್ಟೆ, ಗುರುವಾಯನಕೆರೆ, ಯಿಂದ ಬರುವ ಭಕ್ತಾದಿಗಳು ಜಕ್ರಿಬೆಟ್ಟಿನಿಂದ ಬಂಟ್ವಾಳ ಪೇಟೆಯ ತ್ಯಾಗರಾಜ ರಸ್ತೆಯಲ್ಲಿರುವ ಸರಸ್ವತಿ ನರ್ಸಿಂಗ್ ಹೋಮ್ ಇದರ ಮುಂದೆ ಇರುವ ವಿಶಾಲ ಮೈದಾನ ದಲ್ಲಿ ನಿಲುಗಡೆಗೊಳಿಸುವಂತೆ ಕೋರಲಾಗಿದೆ
ಅದೇರೀತಿ ಶೋಭಯಾತ್ರೆಯಂದು ಬಂಟ್ವಾಳ ರಥ ಬೀದಿ ಹಾಗೂ ಬೈಪಾಸ್ ರಸ್ತೆಯ ವರೆಗೆ ರಸ್ತೆಯ 2 ಬದಿಯಲ್ಲಿವಾಹನವನ್ನು ನಿಲ್ಲಿಸುವುದನ್ನು ನಿಷೇಧಿಸಲಾಗಿದ್ದು, ದೇವಳದಿಂದ ಸೂಚಿಸಿದ ಸ್ಥಳದಲ್ಲಿಯೇ ತಮ್ಮ ವಾಹನವನ್ನು ನಿಲ್ಲಿಸಿ ಸಹಕರಿಸುವಂತೆ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.