ಕೈಕಂಬ : ವಾಮಂಜೂರು ತಿರುವೈಲಿನ ದ.ಕ.ಜಿಪಂ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಶತಮಾನೋತ್ಸವ ಸವಿನೆನಪಿನಲ್ಲಿ ಶಾಲಾ ಶತಮಾನೋತ್ಸವ ಸಮಿತಿ ನಿರ್ಮಿಸಲಿರುವ ಭವ್ಯ ಕಟ್ಟಡಕ್ಕೆ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಜು. ೧೪ರಂದು ಬೆಳಿಗ್ಗೆ ಭೂಮಿಪೂಜೆ ನೆರವೇರಿಸಿದರು.

ಭೂಮಿಪೂಜೆ ಬಳಿಕ ಆಯೋಜಿಸಲಾದ ಸರಳ ಸಮಾರಂಭದಲ್ಲಿ ಡಾ. ಭರತ್ ಶೆಟ್ಟಿ ಮಾತನಾಡಿ, ಸುಮಾರು ೧೦ ವರ್ಷಗಳ ಹಿಂದೆ ಖಾಸಗಿ ಶಾಲೆಗಳ ಭರಾಟೆಯಿಂದ ಸರ್ಕಾರಿ ಶಾಲೆಗಳು ನಿರ್ಲಕ್ಷö್ಯಕ್ಕೊಳಗಾಗಿದ್ದವು. ಈಗ ಹಳೆ ವಿದ್ಯಾರ್ಥಿಗಳು ಮತ್ತು ಸಮಾಜ ಬಾಂಧವರು ಶಾಲೆಗಳ ಅಭಿವೃದ್ಧಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಈ ಶಾಲೆಯ ಹಳೆ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸದ ಮೇಲಿಟ್ಟ ದೂರದೃಷ್ಟಿ ಮೆಚ್ಚುವಂತಹದ್ದು ಎಂದರು.

ಮAಗಳೂರು ನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಸುಮಾರು ೬೦ ಲಕ್ಷದಿಂದ ಒಂದು ಕೋ. ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣದೊಂದಿಗೆ ಶಾಲೆ ವಿಸ್ತರಿಸುವ ಕಾರ್ಯಕ್ರಮ ಇದಾಗಿದೆ. ಶಿಕ್ಷಣಕ್ಕೆ ಮಹತ್ವ ನೀಡುತ್ತಿರುವ ಶಾಲಾ ಹಳೆ ವಿದ್ಯಾರ್ಥಿ ಸಂಘ ಮತ್ತು ಊರಿನವರ ಕಾರ್ಯ ಶ್ಲಾಘನೀಯ. ಈ ಕನ್ನಡ ಶಾಲೆ ಮುಚ್ಚುವ ಹಂತ ತಲುಪಿದಾಗ ಸಮಾನ ಮನಸ್ಕರು ಸೇರಿಕೊಂಡು ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿರುವುದು ಇತರರಿಗೆ ಮಾದರಿ ಸಾಧನೆ ಎಂದರು.

ಈ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳಾದ ಉದ್ಯಮಿ ರಘು ಸಾಲ್ಯಾನ್ ಮತ್ತು ಅವರ ಪತ್ನಿ, ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಶಾಲಾ ವಿದ್ಯಾರ್ಥಿಗಳಿಗೆ ಒದಗಿಸಿದ ಬಣ್ಣದ ಸಮವಸ್ತçವನ್ನು ಡಾ. ಭರತ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ವಿತರಿಸಿದರು. ಶತಮಾನೋತ್ಸವ ಕಟ್ಟಡದ ನೀಲಿನಕ್ಷೆ ಅನಾವರಣಗೊಳಿಸಿದ ಗಣ್ಯರು ಶಾಲಾ ಆವರಣದಲ್ಲಿ ಗಿಡವೊಂದು ನೆಟ್ಟರು.

ಶಾಲಾ ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ರಾಜ್‌ಕುಮಾರ್ ಶೆಟ್ಟಿ ತಿರುವೈಲುಗುತ್ತು ಸ್ವಾಗತಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ್ ಯು. ಅವರು ಸಮಿತಿಯೊಂದಿಗೆ ಕೈಜೋಡಿಸಿದ ದಾನಿಗಳ ಪಟ್ಟಿ ಓದಿದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರತೋಷ್ ಮಲ್ಲಿ, ಪ್ರಧಾನ ಕಾರ್ಯದರ್ಶಿ ಓಂ ಪ್ರಕಾಶ್ ಶೆಟ್ಟಿ, ಕೋಶಾಧಿಕಾರಿ ಮೋಹನದಾಸ ಬಂಗೇರ, ಗೌರವಾಧ್ಯಕ್ಷ ಜಗದೀಶ ಶೇಣವ, ಇಂಜಿನಿಯರ್ ಪುರುಷೋತ್ತಮ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಆಚಾರ್ಯ, ಶಿಕ್ಷಣ ಇಲಾಖೆಯ ಸಿಆರ್‌ಪಿ ಪುಷ್ಪಾವತಿ, ಶಾಲಾ ಮುಖ್ಯ ಶಿಕ್ಷಕಿ ಜಾನೆಟ್ ಪಿಂಟೊ, ಎಸ್‌ಡಿಎಂಸಿ ಉಪಾಧ್ಯಕ್ಷೆ ರೇಷ್ಮಾ, ವಿದ್ಯಾಬೋಧಿನಿ ಎಜ್ಯುಕೇಶನ್ ಟ್ರಸ್ಟ್ನ ಪದಾಧಿಕಾರಿಗಳು ಹಾಗೂ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದ, ಮಕ್ಕಳ ಪೋಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಹಿತೈಷಿಗಳು, ಊರಿನವರು ಇದ್ದರು. ಸಮಿತಿಯ ಉಮೇಶ್ ಕೋಟ್ಯಾನ್ ಅವರು ನಿರೂಪಿಸಿ ವಂದಿಸಿದರು.

ಕೆ Êಕಂಬ

By suddi9

Leave a Reply

Your email address will not be published. Required fields are marked *