ಕೈಕಂಬ: ಪೂಜ್ಯರು ಹಾಕಿಕೊಟ್ಟ ಮಾಗದಲ್ಲಿ ನಡೆದರೆ ಸಾಧನೆಯೆಂಬುವುದು ಕನಸಲ್ಲ. ವಿಶೇಷ ಸಾಧನೆ ಮಾಡಿದ ಸಂಘಗಳನ್ನು ಗುರುತಿಸುವುದರಿಂದ ಉಳಿದ ಸಂಘಗಳಿಗೂ ಉತ್ತಮ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ; ಕೇವಲ ೮ .ಸಂಘಗಳು ಮಾತ್ರ ಉತ್ತಮವಲ್ಲ. ಎಲ್ಲ ಸಂಘಗಳೂ ಉತ್ತಮವೇ ಆದರೆ, ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ೮ ಸಂಘಗಳನ್ನು ಅವುಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಅತ್ಯಂತ ಹತ್ತಿರದಿಂದ ಗಮನಿಸಿ ಆಯ್ಕೆ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಉಳಿದ ಸಂಘಗಳು ಕೂಡಾ ಸಾಧಾನೆ ಮಾಡಿ ಗೌರವವನ್ನು ಪಡೆಯುವಂತಾಗಲಿ” ಎಂದು ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.

ಅವರು ಮಂಗಳವಾರ ಶ್ರೀ ವಿನಾಯಕ ಜನಾರ್ಧನ ದೇವಸ್ಥಾನ ಅಮ್ಮುಂಜೆಯಲ್ಲಿ ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ [ರಿ] ಪೊಳಲಿ ವಲಯ ಮಟ್ಟದ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಅಮ್ಮುಂಜೆ ಗ್ರಾಮ ಪಂಚಾಯತ್ ಅದ್ಯಕ್ಷ ವಾಮನ ಅಚಾರ್ಯ ಮಾತನಾಡಿ “ನಾನು ಪಂಚಾಯತ್, ಅಧ್ಯಕ್ಷನಾಗಿದ್ದರೂ ಕೂಡಾ ಸ್ವಸಹಾಯ ಸಂಘದ ಸದಸ್ಯ. ಸಂಘದ ಸಭೆಗಳು ಹೇಗೆ ನಡೆಯಬೇಕು ಎಂಬುದನ್ನು ಶ್ರೀ.ಕ್ಷೇ.ಧ.ಗ್ರಾ. ಯೋಜನೆ ಕಲ್ಪಿಸಿಕೊಟ್ಟಿದೆ. ಪಂಚಾಯತ್ ಅಧ್ಯಕ್ಷ ಎನ್ನುವುದಕ್ಕಿಂತಲೂ ನಾನು ಸ್ವಸಹಾಯ ಸಂಘದ ಸದಸ್ಯ ಎನ್ನಲು ಹೆಚ್ಚು ಹೆಮ್ಮೆಪಡುತ್ತೇನೆ” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಡಿ. ಎ. ಅಬೂಬಕ್ಕರ್ ಧರ್ಮಸ್ಥಳದಿಂದ ನಡೆಸುವ ಸಾಮಾಜಿಕ ಕಾರ್ಯಕ್ರಮಗಳ, ಸಾಮೂಹಿಕ ವಿವಾಹ, ಧಾರ್ಮಿಕ ಕೇಂದ್ರಗಳಿಗೆ ಅನುದಾನ, ಬಡವರ ಕಲ್ಯಾಣಕ್ಕಾಗಿ ಆರ್ಥಿಕ ಸಹಾಯ, ರುದ್ರಭೂಮಿಗೆ ಸಹಾಯ ಮುಂತಾದ ಕಾರ್ಯಕ್ರಮಗಳನ್ನು ವಿವರಿಸಿದ ಅವರು ಪರಮ ಪೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮ ಸ್ಥಳದಿಂದ ನಡೆಸುವ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಅತ್ಯಂತ ಗೌರವದಿಂದ ಮಾತಾನಾಡಿದರು, ಸಾಮೂಹಿಕ ವಿವಾಹ, ಧಾರ್ಮಿಕ ಕೇಂದ್ರಗಳಿಗೆ ಅನುದಾನ, ಬಡವರ ಕಲ್ಯಾಣಕ್ಕಾಗಿ ಆರ್ಥಿಕ ಸಹಾಯ, ರುದ್ರಭೂಮಿಗೆ ಸಹಾಯ ಮುಂತಾದ ಕಾರ್ಯಕ್ರಮಗಳನ್ನು ಕೊಂಡಾಡಿದರು. ಸ್ವಸಹಾಯ ಸದಸ್ಯರಿಗೆ ” ನಮಗೆ ೨೦,೦೦೦ರೂ. ಅವಶ್ಯಕತೆ ಇದ್ದರೆ ೨೦,೦೦೦ರೂ ಮಾತ್ರ ಸಾಲ ಪಡೆಯಬೇಕು. ಅದರ ಬದಲು ೫೦,೦೦೦ರೂ ಸಾಲ ಪಡೆದರೆ ಅನಾವಶ್ಯಕ ಹಣ ಖರ್ಚಾಗುವುದಲ್ಲದ, ಸಾಲದ ಹೊರೆಯೂ ಹೆಚ್ಚಾಗುತ್ತದೆ, ಈ ಬಗ್ಗೆ ಎಚ್ಚರಿಕೆಯಿಂದ ವ್ಯವಹಾರ ಮಾಡಿದರೆ ಪ್ರತಿಯೊಬ್ಬರು ಅಭಿವೃದ್ದಿ ಹೊಂದಲು ಸಾಧ್ಯ” ಎಂದರು.


ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಜನ ಜಾಗೃತಿ ವೇದಿಕೆಯ ಅಧ್ಯಕ್ಷ ರೊನಾಲ್ಡ್ ಡಿ’ಸೋಜ ವಹಿಸಿದ್ದರು. ಕಾಯಕ್ರಮವನ್ನು ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸತೀಶ್ ಶೆಟ್ಟಿ ದೀಪ ಬೆಳಗಿಸಿ, ಕಲ್ಪವೃಕ್ಷದ ಹಿಂಗಾರವನ್ನು ಅರಳಿಸುವ ಮೂಲಕ ಉದ್ಘಾಟಿಸಿದರು. ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ವಾಮನ ಆರ್ಚಾಯ, ನಂದಿನಿ ಗ್ರೂಪ್ಸ್ ಬೆಂಜನಪದವು ಇದರ ಮಾಲಕರಾದ ಬಿ. ಉಮೇಶ ಸಾಲ್ಯಾನ್, ಪೊಳಲಿ ವಲಯ ಜನ ಜಾಗೃತಿ ವೇದಿಕೆ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಡಿ.ಎ. ಅಬೂಬಕ್ಕರ್ ಅಮ್ಮುಂಜೆ, ಹೇಮಲತಾ. ಎನ್.ರಾವ್, ಪೊಳಲಿ ವೆಂಕಟೇಶ ನಾವಡ ಪೊಳಲಿ, ಜನಾರ್ಧನ ಆಚಾರ್ಯ ಪುಂಚಮೆ ಮುಂತಾದವರು ಉಪಸ್ಥಿತರಿದ್ದರು.


ವಲಯ ಮಟ್ಟದಲ್ಲಿ ಉತೃಷ್ಟ್ರ ಸಾಧನೆ ಮಾಡಿದ ಉತ್ತಮ ಸಂಘಗಳನ್ನು ಗುರುತಿಸಿ ಗೌರವಿಸಲಾಯಿತು. ಬಡಗಬೆಳ್ಳೂರು ಒಕ್ಕೂಟದ ಓಂ ಶಕ್ತಿ ಸ್ವಸಹಾಯ ಸಂಘ, ಕೊಡ್ಮಾಣ್ ಒಕ್ಕೂಟದ ಭಾಗ್ಯಜ್ಯೋತಿ ಸ್ವಸಹಾಯ ಸಂಘ, ಬೆಂಜನಪದವು’ಎ’ಒಕ್ಕೂಟದ ಜನನಿ ಸ್ವಸಹಾಯ ಸಂಘ, ಕರಿಯಂಗಳ ಒಕ್ಕೂಟದ ಶ್ರೀ ದುರ್ಗೆ ಸ್ವಸಹಾಯ ಸಂಘ, ಧನುಪೂಜೆ ಒಕ್ಕೂಟದ ಸೌಜನ್ಯ ಸ್ವಸಹಾಯ ಸಂಘ, ಮೇರಮಜಲು ಒಕ್ಕೂಟದ ಶ್ರೀನಿಧಿ ಸ್ವಸಹಾಯ ಸಂಘ, ಅಮ್ಮುಂಜೆ ಒಕ್ಕೂಟದ ಧರ್ಮ ಜ್ಯೋತಿ ಸ್ವಸಹಾಯ ಸಂಘ ಹಾಗೂ ಬಡಗಬೆಳ್ಳೂರು ಒಕ್ಕೂಟದ ಪ್ರಗತಿ ಬಂಧು ಸಂಘಗಳು ಗೌರವವನ್ನು ಪಡೆದವು.

ಯೋಜನೆಯಿಂದ ಪ್ರಗತಿನಿಧಿ ಸಾಲ ಪಡೆದು ಯಶಸ್ವಿಯಾಗಿ ಸ್ವ ಉದ್ಯೋಗವನ್ನು ಮಾಡಿ ಅತ್ಯುತ್ತಮ ಸಾಧನೆ ಮಾಡಿದ ಬೆಂಜನಪದವು ಎ ಒಕ್ಕೂಟದ ಶ್ರೀ ಲಲಿತಾಂಬಿಕಾ ಸ್ವಸಹಾಯ ಸಂಘದ ಶೇಖರ್ ಹಾಗೂ ಧನುಪೂಜೆ ಒಕ್ಕೂಟದ ಪಡೀಲ್ ಬೈಲ್ ಸ್ವಸಹಾಯ ಸಂಘದ ತಿಮ್ಮಪ್ಪ ಕುಲಾಲ್ ಅವರನ್ನು ಈ ಸಂದಭದಲ್ಲಿ ಗೌರವಿಸಲಾಯಿತು.

ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ನೆತ್ತರಕೆರೆ ನಿವಾಸಿ, ಸ್ವಸಹಾಯ ಸಂಘದ ಸದಸ್ಯೆ ಶೋಭಾ_ರಾಜೇಶ್ ದಂಪತಿಯ ಪುತ್ರಿಯರಾದ ಕು| ಹಂಸಿಕಾ ಮತ್ತು ಕು| ಭೂಮಿಕಾ ಇವರ ಸಾಧನೆಯನ್ನು ಗುರುತಿಸಿ ಕಾಯಕ್ರಮದಲ್ಲಿ ಗೌರವಿಸಲಾಯಿತು.

ಪರಮ ಪೂಜ್ಯ ಪದ್ಮವಿಭೂಷಣ ರಾಜಶ್ರೀ ಡಾ| ಡಿ. ವೀರೇಂದ್ರಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಕೃಪಾಶೀವಾದದೊಂದಿಗೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಸಾಧನಾ ಸಮಾವೇಶವು ಹರೀಶ್ ಮಣಿಕಂಠಪುರ ಅವರ ಪ್ರಾರ್ಥನೆಯೊಂದಿಗೆ ಶ್ರೀ ವಿನಾಯಕ ಜನಾರ್ಧನ ದೇವಸ್ಥಾನ ಅಮ್ಮುಂಜೆಯಲ್ಲಿ ಯಶಸ್ವಿಯಾಗಿ ನೆರವೇರಿತು.

ಪೊಳಲಿ ವಲಯದ ವಲಯ ಮೇಲ್ವಿಚಾರಕಿ ಹರಿಣಾಕ್ಷಿ ಸ್ವಾಗತಿಸಿ. ಸಂದೀಪ್ ಧನುಪೂಜೆ ವಂದಿಸಿದರು. ಸೇವಾ ಪ್ರತಿನಿಧಿ ರತ್ನ ವರದಿ ವಾಚಿದರು. ಬೆಂಜನಪದವು ಎ ಒಕ್ಕೂಟದ ಅಧ್ಯಕ್ಷ ಜನಾರ್ಧನ .ಆರ್. ಬಾರಿಂಜೆ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *