1ಕೋಟಿ 48 ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ ಶಾಸಕ ಡಾ. ಭರತ್ ಶೆಟ್ಟಿ ಚಾಲನೆ
ಕೈಕಂಬ: ಅವರು ಮಂಗಳೂರು ಮಹಾನಗರ ವ್ಯಾಪ್ತಿಯ ಕಾಟಿಪಳ್ಳ ಉತ್ತರ ವಾರ್ಡ್‌ನಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ 6ನೇ ವಿಭಾಗದ ರಸ್ತೆ ಅಭಿವೃದ್ಧಿಗೆ 30ಲಕ್ಷ, ಕೃಷ್ಣ ಮಠ ರಸ್ತೆ ಸಮಗ್ರ ಅಭಿವೃದ್ಧಿಗೆ 19ಲಕ್ಷ, 6ನೇ ವಿಭಾಗದ ಮುಂದುವರಿದ ಕಾಮಗಾರಿಗೆ 19ಲಕ್ಷ, ಮತ್ತು ಲೋಕೋಪಯೋಗಿ ಇಲಾಖೆಯಿಂದ ಮಂಜೂರಾತಿಗೊಂಡ ರಸ್ತೆ ಕಾಂಕ್ರಿಟೀಕರಣಕ್ಕೆ ಮತ್ತು ಚರಂಡಿ ರಚನೆಗೆ 80ಲಕ್ಷ ಒಟ್ಟು ಸೇರಿ 1ಕೋಟಿ 48 ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು.
ಪಕ್ಷಾತೀತ ನೆಲೆಯಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ ಎಂದು ಶಾಸಕರಾದ ಡಾ ಭರತ್ ಶೆಟ್ಟಿ ವೈ ನುಡಿದರು. ಬಾಕಿಯುಳಿದ ಕೃಷ್ಣಾಪುರ ಮಾರುಕಟ್ಟೆ ಯೋಜನೆಗೆ ಈಗಾಗಲೇ ಅನುದಾನ ಇರಿಸಿ ಕಾಮಗಾರಿ ಪ್ರಾರಂಭಗೊಂಡಿದೆ ಎಂದರು.
ಅನುದಾನ ಒದಗಿಸಿದ ನೆಲೆಯಲ್ಲಿ ಶಾಸಕರನ್ನು ಗ್ರಾಮಸ್ಥರ ನೆಲೆಯಲ್ಲಿ ಮಂಗಳೂರು ಉತ್ತರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ
ಭರತ್‌ರಾಜ್ ಕೃಷ್ಣಾಪುರ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಪ್ರಮುಖ್ ಹರಿಪ್ರಸಾದ್ ಸಹ ಪ್ರಮುಖ್ ರಾಕೇಶ್, ಬೂತ್ ಅಧ್ಯಕ್ಷ ರವಿ ಪೂಜಾರಿ, ಜಯಚಂದ್ರ, ಮಂಡಲ ಕೋಶಾಧಿಕಾರಿ ಪುಷ್ಪರಾಜ್, ಪ್ರಜ್ವಲ್ ಬೂತ್ ಯುವ ಮೋರ್ಚಾ ಕಾರ್ಯದರ್ಶಿ ದೀಪಕ್ ದೇವಾಡಿಗ, ಸುಕೇಶ್ ಭಟ್, ದಾವೂದ್ ಬಿಎಂಆರ್, ರಮೇಶ್ ಆಚಾರ್ಯ, ಭಾಸ್ಕರ ಸನಿಲ್, ಸುಮಿತ್ರಾ ಆನಂದ, ನಾಗೇಶ್ ಮನೋಜ್ ಮುಂತಾದವರು ಉಪಸ್ಥಿತರಿದ್ದರು.