ಕೈಕಂಬ : ಗುರುಪುರ ಕೈಕಂಬದ ಲಯನ್ಸ್ ಕ್ಲಬ್ ನ. ೨೫ರಂದು ಮೂಡುಶೆಡ್ಡೆಯ ಕ್ಷಯ ರೋಗ ಆಸ್ಪತ್ರೆಗೆ ನೀರು ಶುದ್ಧೀಕರಣ ಘಟಕ, ರೋಗಿಗಳಿಗೆ ಹಣ್ಣುಹಂಪಲು, ಬಟ್ಟೆಬರೆ, ಸೊಳ್ಳೆ ಪರದೆ ಅಳವಡಿಸಲು ಕಬ್ಬಿಣದ ರಾಡ್ ಮತ್ತಿತರ ಅಗತ್ಯ ಸೊತ್ತು ಕೊಡುಗೆಯಾಗಿ ನೀಡಿತು.

ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಸಂಜೀತ್ ಎಸ್. ಶೆಟ್ಟಿ ಮಾತನಾಡಿ, ಅಗತ್ಯವಿರುವ ಪ್ರತಿಯೊಂದು ಕ್ಷೇತ್ರಕ್ಕೆ ಲಯನ್ಸ್ ಕ್ಲಬ್ ಕೊಡುಗೆ ನೀಡುತ್ತ ಬಂದಿದೆ. ಸುಮಾರು ೩೦ ವರ್ಷಗಳ ಹಿಂದಿದ್ದ ಇಲ್ಲಿನ ಸ್ಥಿತಿ ಈಗ ಬದಲಾಗಿದೆ ಎಂದರು.

ಆಸ್ಪತ್ರೆಯ ಡೀನ್ ಡಾ. ರಚನಾ ಶೆಟ್ಟಿ ಮಾತನಾಡಿ, ನಮ್ಮ ಆಸ್ಪತ್ರೆಗೆ ಮೂಲ ಸೌಕರ್ಯ ಒದಗಿಸಲು ಮುಂದೆ ಬರುವ ಸಂಸ್ಥೆಗಳು ಕಡಿಮೆ. ಆದರೆ ಗುರುಪುರ ಕೈಕಂಬ ಲಯನ್ಸ್ ಕ್ಲಬ್ ವಿಶೇಷ ಆಸಕ್ತಿಯಿಂದ ಕೊಡುಗೆ ನೀಡಲು ಮುಂದೆ ಬಂದಿದೆ ಎಂದರು.

ಲ. ವಸಂತ್ ಕುಮಾರ್ ಶೆಟ್ಟಿ, ಲ. ವಸಂತ್ ಶೆಟ್ಟಿ ಶ್ರದ್ಧಾ ಮಾತನಾಡಿದರು. ಕಾರ್ಯಕ್ರಮದ ನೇತೃತ್ವದ ವಹಿಸಿದ್ದ ಗುರುಪುರ ಕೈಕಂಬ ಲಯನ್ಸ್ ಕ್ಲಬ್ ಅಧ್ಯಕ್ಷ ಮೆಲ್ವಿನ್ ಸಲ್ಡಾನ ಸ್ವಾಗತಿಸಿ, ಪ್ರಸ್ತಾವಿಕ ಮಾತನ್ನಾಡಿದರು. ಡಾ. ಸುಭಾಷ್, ಡಾ. ರುಕ್ಮಿಣಿ, ಮುಖ್ಯ ಶುಶ್ರೂಷಕಿ ಆಗ್ನೇಸ್, ಲ. ಜೇಮ್ಸ್ ಮೆಂಡ, ಲ. ಜೆಫ್ರಿಯನ್ ತಾವ್ರೋ, ಲಯನ್ಸ್ ಪದಾಧಿಕಾರಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಆಸ್ಪತ್ರೆಯ ಸಿಬ್ಬಂದಿ ಅಶ್ವಿನ್ ವಂದಿಸಿದರು.

ಗುರುಪುರ ಕೈಕಂಬದ ಲಯನ್ಸ್ ಕ್ಲಬ್ ಮೂಡುಶೆಡ್ಡೆಯಲ್ಲಿರುವ ಕ್ಷಯ ರೋಗ ಆಸ್ಪತ್ರೆಗೆ ನೀರು ಶುದ್ಧೀಕರಣ ಘಟಕ, ಸೊಳ್ಳೆ ಪರದೆ ಅಳವಡಿಕೆಗೆ ಕಬ್ಬಿಣದ ರಾಡ್, ಹಣ್ಣುಹಂಪಲು, ಬಟ್ಟೆಬರೆ ಕೊಡುಗೆಯಾಗಿ ನೀಡಿತು.

By Suddi9

Leave a Reply

Your email address will not be published. Required fields are marked *