ಮಂಗಳೂರು: ಜಗತ್ತಿನಾದ್ಯಂತ ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವ ಮಾರಾಣಾಂತಿಕ ರೋಗಗಳಲ್ಲಿ ಒಂದಾಗಿರುವ ಎಬೋಲ ರೋಗದ ವೈರಸ್ಸನ್ನು ಪತ್ತೆಹಚ್ಚುವ ಇಮೇಜ್ ಸ್ಕ್ಯಾನರನ್ನು ಮಂಗಳೂರು ಅಂತಃರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಅಳಪಡಿಸುವಂತೆ ಭಾರತ ವಿಮಾಣ ಪ್ರಾಧಿಕಾರವು ಕೇಂದ್ರ ಆರೋಗ್ಯ ಇಲಾಖೆಯಲ್ಲಿ ಮನವಿಯನ್ನು ಸಲ್ಲಿಸಿತ್ತು.

scanner

 

ebola

ಈ ಮನವಿಯ ಅನ್ವಯ ಶನಿವಾರ ಮಂಗಳೂರು ವಿಮಾಣ ನಿಲ್ದಾಣಕ್ಕೆ ಭೇಟಿ ನೀಡಿದ ನಾಗರೀಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ಬೆಂಗಳೂರು ಮತ್ತು ಹೃದರಾಬಾದ್ ಇದರ ನಿರ್ದೇಶಕ ಜೆ.ಟಿ.ರಾಧಾಕೃಷ್ಣ ಹಾಗೂ ಇವರ ತಂಡ ಭೇಟಿ ನೀಡಿ ಈ ಬಗ್ಗೆ ಪರಿಶೀಲನೆ ನಡೆಸಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಧಾಕೃಷ್ಣ ಇದುವರೆಗೂ ಇಂತಹ ರೋಗ ಇರುವ ವ್ಯಕ್ತಿಗಳು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿಲ್ಲ ಎಂದು ತಿಳಿಸಿದರು.

By suddi9

Leave a Reply

Your email address will not be published. Required fields are marked *