ಮುಂಬಯಿ: ಬಿಎಸ್‌ಕೆಬಿ ಅಸೋಸಿಯೇಶನ್‌ನ ಗೋಕುಲ ಇಲ್ಲಿನ ಸರಸ್ವತಿ ಸಭಾಗೃಹದಲ್ಲಿ ಇತ್ತೀಚೆಗೆ (ಅ.೩೦) ಬಾಲ ಕಲಾವೃಂದ ಉದ್ಘಾಟಿಸಲ್ಪಟ್ತಿತು. ಬಿಎಸ್‌ಕೆಬಿಎ ಕಾರ್ಯದರ್ಶಿ ಎ.ಪಿ.ಕೆ ಪೋತಿ, ಗೋಕುಲ ಕಲಾವೃಂದದ ಸಂಚಾಲಕಿ ವಿನೋದಿನಿ ರಾವ್, ಬಾಲ ಕಲಾವೃಂದದ ಮುಖ್ಯಸ್ಥೆ ಗೀತಾ ಹೇರಳೆ, ಗೋಕುಲ ಸಮಿತಿ ಸದಸ್ಯರಾದ ಚಂದ್ರಶೇಖರ್ ಭಟ್ ಪ್ರಧಾನವಾಗಿ ಉಪಸ್ಥಿತರಿದ್ದು ಬಿಎಸ್‌ಕೆಬಿಎ (ಗೋಕುಲ) ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ದೀಪ ಪ್ರಜ್ವಲಿಸಿ ಕಲಾವೃಂದ ಉದ್ಘಾಟಿಸಿ ಶುಭ ಕೋರಿದರು.

ಇತ್ತೀಚೆಗೆ ಮುಂಬಯಿಯಲ್ಲಿ ಹಾಗೂ ದೇಶ ವಿದೇಶದಲ್ಲಿ ಕರ್ನಾಟಕ ಸರಕಾರ ನಡೆಸಿದ ಕೋಟಿ ಕಂಠ ಗಾಯನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶೈಕ್ಷಣಿಕ ಮತ್ತು ಅನುಕೂಲಕ್ಕಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಮಕ್ಕಳು ಮಾತೃಭಾಷೆ ಕನ್ನಡವನ್ನು ಕಲಿಯಲೇಬೇಕು. ಸಣ್ಣ ಮಕ್ಕಳಿಗೆ ನಿತ್ಯ ಅನುಷ್ಠಾನದ ನಿತ್ಯವಿಧಿಗಳ ಬಗ್ಗೆ ಕಲಿಸಬೇಕು. ಅವರು ಬೇಗನೇ ಕಲಿತು ಕೊಳ್ಳುತ್ತಾರೆ ಇಂತಹ ಹತ್ತಾರು ಅವಶ್ಯಕತೆಗಳಿಗೆ ಈ ಗೋಕುಲ ಬಾಲ ಕಲಾವೃಂದ ಸೂಕ್ತ ವೇದಿಕೆಯಾಗಲಿದೆ. ಕಲಾ ಜಗತ್ತು ಚಿಣ್ಣರ ಬಿಂಬ ಹಾಗೂ ಬಾಲ ಕಲವೃಂದದ ಉದ್ದೇಶ ಒಂದೇ ಆಗಿದೆ. ಈ ಬಾಲ ಕಲಾವೃಂದಕ್ಕೆ ನೂರಾರು ಮಕ್ಕಳು ಸೇರುವಂತಾಗಲಿ, ಇದರ ಪ್ರಯೋಜನವನ್ನು ಎಲ್ಲಾ ಮಕ್ಕಳು ಪಡೆಯುವಂತಾಗಲಿ, ಎಲ್ಲರೂ ಒಗ್ಗಟ್ಟಾಗಿ ಗೋಕುಲದ ಅಭಿವೃದ್ಧಿಗೆ ಪ್ರಯತ್ನಿಸೋಣ ಎಂದು ಡಾ| ಸುರೇಶ್ ಎಸ್.ರಾವ್ ತಿಳಿಸಿದರು.

ಎ.ಪಿ.ಕೆ ಪೋತಿ ಮಾತನಾಡಿ ಇದೊಂದು ಪ್ರತಿಭಾನ್ವೇಶನಾ ವೇದಿಕೆಯಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಂಡು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿ ಪ್ರತಿಭಾ ಸಂಪನ್ನರಾಗಬೇಕು ಎಂದರು.

ಗೀತಾ ಹೇರಳೆ ಮಾತನಾಡಿ ಕನ್ನಡ ಭಾಷೆ ಅಲ್ಲದೆ, ನಮ್ಮ ನಡೆನುಡಿ, ಆಚಾರ ವಿಚಾರ, ಸಂಸ್ಕಾರ ಹೇಳಿ ಕೊಡುವುದೇ ನಮ್ಮ ಸಂಸ್ಥೆಯ ಉದ್ದೇಶ ಹಾಗೂ ಎಲ್ಲಾ ಸದಸ್ಯರು ತಮ್ಮ ೬ ರಿಂದ ೧೫ವರ್ಷದ ಮಕ್ಕಳನ್ನು ಬಾಲ ಕಲಾವೃಂದಕ್ಕೆ ಸೇರಿಸಿ ಮಕ್ಕಳನ್ನು ಪ್ರತಿಭಾನ್ವಿತರನ್ನಾಗಿಸಿ ಎಂದರು.

ವಿನೋದಿನಿ ರಾವ್ ಸ್ವಾಗತಿಸಿ ಪ್ರಸ್ತಾವನೆಗೈದು ಎಲ್ಲ ಮಕ್ಕಳು ಕನ್ನಡ ಅಭ್ಯಾಸ, ಭಜನೆ, ಕಲಿಕೆಗೆ ಎಲ್ಲಾ ಪಾಲಕರ ಪ್ರೋತ್ಸಾಹ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಬಿಎಸ್‌ಕೆಬಿಎ ಕೋಶಾಧಿಕಾರಿ ಸಿಎ| ಹರಿದಾಸ್ ಭಟ್, ಕಾರ್ಯಕಾರಿ ಸಮಿತಿ ಸದಸ್ಯ ದೀಪಕ್ ಶಿವತ್ತಾಯ, ರಾಮವಿಠಲ ಕಲ್ಲೂರಾಯ, ವಿದ್ಯಾ ರಾವ್, ಪ್ರೇಮ ಬಿ.ರಾವ್, ಸಹನಾ ಪೋತಿ ಹಾಗೂ ಸದಸ್ಯರನೇಕರು ಉಪಸ್ಥಿತರಿದ್ದರು.

ಚಿಣ್ಣರ ಶ್ಲೋಕದೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಭಾಷಣ, ಏಕಪಾತ್ರ ಅಭಿನಯ, ದೇಶಭಕ್ತಿ ಗೀತೆ, ಜಾನಪದ ಗೀತೆ, ಶ್ಲೋಕ, ಭಜನೆ, ಮಂತ್ರ ಪುಷ್ಪ ಮುಂತಾದವುಗಳಿಗೆ ಸಂಜನ ಮಯ್ಯ, ತೇಜಸ್ವಿನಿ ಮಂಗಲಪಾಡಿ, ಸಂಭ್ರಮ ಮಯ್ಯ, ಸನಾತನ ಸೂರಜ್ ತಮನ್ ಕರ್, ಆದಿತ್ಯ ಭಟ್, ಇಂದು ರಾವ್, ಪೃಥ್ವೇಶ ಭಟ್, ಚಂದನ್ ಹೆಬ್ಬಾರ್, ಶ್ರೀಕೃಷ್ಣ ಉಡುಪ, ರಾಜೇಶ್ವರಿ ಭಟ್, ಕಿರ್ತೀನ ಭಟ್ ಮುಂತಾದವರು ಭಾಗವಹಿಸಿದ್ದು, ಶಾಂತಿಲಕ್ಷ್ಮಿ ಉಡುಪ ಮತ್ತು ಶ್ರೀ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ವೀಣಾ ಭಟ್ ಧನ್ಯವದಿಸಿದರು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮವು ಸಂಪನ್ನ ಗೊಂಡಿತು.

By suddi9

Leave a Reply

Your email address will not be published. Required fields are marked *