ಮಾಂಡ್ ಸೊಭಾಣ್‌ನಿಂದ ೨೫೧ನೇ ತಿಂಗಳ ಕೊಂಕಣಿ ಸಂಗೀತ ಮಂಜರಿ ಕಾರ್ಯಕ್ರಮ ಯೊಡ್ಲಿಂಗ್‌ಕಿಂಗ್ ಮೆಲ್ವಿನ್ ಪೆರಿಸ್ ಇವರಿಗೆ ‘ಕಲಾಕಾರ್ ಪುರಸ್ಕಾರ’ ಪ್ರದಾನ
ಮುಂಬಯಿ: ಕಾರ್ವಾಲ್ ಮನೆತನ ಮತ್ತು ಮಾಂಡ್ ಸೊಭಾಣ್ ಜಂಟಿಯಾಗಿ ನೀಡುವ ೧೮ನೇ ಕಲಾಕಾರ್ ಪುರಸ್ಕಾರ ಪ್ರದಾನ ಮತ್ತು ೨೫೧ನೇ ತಿಂಗಳ ವೇದಿಕೆ ಕಾರ್ಯಕ್ರಮ ಕಳೆದ ಭಾನುವಾರ ಮಂಗಳೂರು ಶಕ್ತಿನಗರದಲ್ಲಿನ ಕಲಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿüಯಾಗಿದ್ದ ನೆಲ್ಸನ್ ರಾಡ್ರಿಕ್ಸ್ ಅವರು ಶಾಲು, ಫಲಪುಷ್ಪ, ಉರ್ಮಾಲ್ (ಕೊಂಕಣಿಯ ಸಾಂಪ್ರದಾಯಿಕ ಪೇಟ), ಸ್ಮರಣಿಕೆ, ಸನ್ಮಾನ ಪತ್ರ ಹಾಗೂ ರೂ ೫೦,೦೦೦/- ಚೆಕ್‌ನೊಂದಿಗೆ ‘ಕಲಾಕಾರ್ ಪುರಸ್ಕಾರ’ ಪ್ರದಾನಿಸಿ ಯೊಡ್ಲಿಂಗ್‌ಕಿAಗ್ ಮೆಲ್ವಿನ್ ಪೆರಿಸ್ ಇವರನ್ನು ಸನ್ಮಾನಿಸಿ ಅಭಿನಂದಿಸಿದರು. ಮೆಲ್ವಿನ್ ಸನ್ಮಾನ ಸ್ವೀಕರಿಸಿ ಮಾತನಾಡಿ ತನ್ನ ಗಾನಪಯಣದಲ್ಲಿ ಸಹಕರಿಸಿದವರನ್ನು ನೆನೆದÀÄ ವಂದಿಸಿದರು.
ಡಾ| ಪ್ರತಾಪ್ ನಾಯ್ಕ್ ಇವರು ಈ ವರ್ಷ ತನ್ನ ಕುಟುಂಬವು ಪುರಸ್ಕಾರದ ಮೊತ್ತವನ್ನು ದ್ವಿಗುಣಗೊಳಿಸಿದ ಬಗ್ಗೆ ಘೋಷಿಸಿದರು. ಮತ್ತು ನಾಡಿನ ದೊಡ್ಡ ಮನೆತನದವರು ಕಲಾವಿದರನ್ನು ಪ್ರೋತ್ಸಾಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಲು ಕರೆ ನೀಡಿದರು
ವೇದಿಕೆಯಲ್ಲಿ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ಉಪಾಧ್ಯಕ್ಷೆ ಐರಿನ್ ರೆಬೆಲ್ಲೊ, ಉಪಸ್ಥಿತರಿದ್ದರು. ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಸನ್ಮಾನ ಪತ್ರ ವಾಚಿಸಿದರು. ಅರುಣ್ ರಾಜ್ ರಾಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.
ನಂತರ ೨೫೧ನೇ ತಿಂಗಳ ವೇದಿಕೆ ಸರಣಿಯ ಕಾರ್ಯಕ್ರಮವಾಗಿಸಿ ಗೋವಾದ ಸ್ವರಶ್ರೀ ತಂಡದಿAದ ಗೀತ್ ಗೊಂಯ್ಚಾ ್ಯ ಅಸ್ಮಿತಾಯೆಚೆಂ ಸಂಗೀತ ಮಂಜರಿ ಪ್ರಸ್ತುತ ಪಡಿಸಿತು. ರಮಾನಂದ ರಾಯ್ಕರ್ ನಿರ್ದೇಶನದಲ್ಲಿ ಸೋನಾಲಿ ಪೆಡ್ನೆಕರ್, ಸಂದೇಶ್ ಕುಂಡಾಯ್ಕರ್, ದೀಪ್ತೀ ಕುಂಡಾಯ್ಕರ್, ಯೋಗಿತಾ ವೆರ್ಣೆಕರ್, ಶೈಲೆಶ್ ಸಾಲ್ಗಾಂವ್ಕರ್, ಶಯನಿ ಸಾಲ್ಗಾಂವ್ಕರ್, ಪ್ರಮೋದ್ ಸುರ್ಲೆಕರ್, ಮಂಗೇಶ್ ಶೆಟ್ಯೆ, ರಾಜು ಪರಬ್, ನವ್ಸೊ ನಾಯಕ್, ಅತುಲ್ ಪರಬ್, ಧಿಗೇಶ್ ಆಂಗ್ಲೊ, ಜಿತೇಂದ್ರ ತಾಂಡೆಲ್, ಸಾಯ್ರಾಜ್ ಕೇರ್ಕರ್, ಆದಿ ವೆರ್ಣೆಕರ್, ಗೌರಿಶ್ ವೆರ್ಣೆಕರ್ ಇವರು ಕಾರ್ಯಕ್ರಮ ನೀಡಿದರು.