ಬಂಟ್ವಾಳ : ಬಿ.ಸಿ.ರೋಡ್ ಸೋಮಯಾಜಿ ಹೌಸ್ನಲ್ಲಿ ವಿಜಯಕುಮಾರಿ ಇಂದ್ರರ ಎಲ್.ಐ.ಸಿ. ಪ್ರಿಮಿಯಮ್ ಕಲೆಕ್ಷನ್ ಪಾಯಿಂಟ್ ನ ಉದ್ಘಾಟನೆಯನ್ನು ಉಡುಪಿ ಡಿವಿಜನ್ನ ಕ್ಲಿಯಾ ಮೆನೇಜರ್ ದೊರೆಸ್ವಾಮಿ ನಾಯಕ್ ಉದ್ಘಾಟನೆ ಮಾಡಿ , ಎಲ್.ಐ.ಸಿಯ ಅಗಾಧ ಸಾಧನೆ , ಸಾರ್ವಜನಿಕ ಹಿತಾಸಕ್ತಿ ಪಾಲಿಸಿದಾರರ ಬಗ್ಗೆ ಇರುವ ಕಾಳಜಿ ಹೊಸ ಯೋಜನೆಗಳ ಕುರಿತು ತಿಳಿಯ ಹೇಳಿದರು .

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಬಂ.ವಿಮಾ ಶಾಖೆಯ ಶಾಖಾಧಿಕಾರಿ ಸಿ.ಚಂದ್ರು ರವರು ಪ್ರತಿನಿಧಿಯಾಗಿ ವಿಜಯಾಕುಮಾರಿಯವರು ಸಲ್ಲಿಸುತ್ತಿರುವ ಸೇವೆಯನ್ನು ಪ್ರಶಂಸಿದರು . ಮುಖ್ಯ ಅತಿಥಿಗಳಾಗಿ ಬಿ.ಸಿ.ರೋಡ್ನ ಗಣ್ಯ ಉದ್ಯಮಿ ಮಾಲತಿ ಸಂಜೀವ ಪೂಜಾರಿ ಮತ್ತು ಎಲ್.ಐ.ಸಿ.ಯ ಆಡಳಿತಾಧಿಕಾರಿ ಗೋಪಾಲ್ಕೃಷ್ಣ ಭಟ್ ಆಗಮಿಸಿದ್ದರು . ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ , ಸಿದ್ದಕಟ್ಟೆ ಅರ್ಕಕೀರ್ತಿ ಇಂದ್ರ , ಅಭಿವೃದ್ಧಿ ಅಧಿಕಾರಿಗಳಾದ ಹರಿಶ್ಚಂದ್ರ ಭಟ್ , ಪ್ರಶಾಂತ್ ಕೋಟ್ಯಾನ್ , ವಿಮಲಾ ಶ್ಯಾಮ್ ಭಟ್ ಪ್ರತಿನಿಧಿಗಳಾದ ಜಯಕೀರ್ತಿ , ರೋಹಿಣಿಕಾರಂತ್ , ಗೀತಾ ಜಿನಚಂದ್ರ ಉಪಸ್ಥಿತರಿದ್ದರು .
ನಾರಾಯಣ ಸೋಮಯಾಜಿಯವರು ಶುಭಾಸಂಶನೆಗೈದರು . ವಿಜಯಕುಮಾರಿ ಇಂದ್ರರವರು ಸ್ವಾಗತಿಸಿ , 34 ವರ್ಷಗಳ ತನ್ನ ಜೀವ ವಿಮಾ ಪ್ರತಿನಿಧಿತ್ವದ ಸಂದರ್ಭದಲ್ಲಿ ಸಹಕಾರ ನೀಡಿದ ಎಲ್ಲಾ ಗ್ರಾಹಕರಿಗೂ ಕೃತಜ್ಞತೆ ಸಲ್ಲಿಸಿದರು . ಚಿತ್ರಸೇನ ಕುಮಾರ್ ಜೈನ್ ವಂದಿಸಿ, ಪಾ/ಅನಂತರಾಜ ಇಂದ್ರರು ಕಾರ್ಯಕ್ರಮ ನಿರ್ವಹಿಸಿದರು .
