ಮುಂಬಯಿ : ಕಾಸರಗೋಡು ಉಪ್ಪಳ ಇಲ್ಲಿನ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಳೆದ ಭಾನುವಾರ ಗೋಸೂಕ್ತ ಹವನ ಧಾರ್ಮಿಕ ಸಭೆ ನಡೆಸಲ್ಪಟ್ಟಿತು. ಶ್ರೀ ಕ್ಷೇತ್ರ ಕೊಂಡೆವೂರು ಮಠಾಧಿಪತಿ ಶ್ರೀ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ದೀಪಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.

ಶ್ರೀಕ್ಷೇತ್ರ ಕಟೀಲು ಇದರ ಬ್ರಹ್ಮಶ್ರೀ ಅನಂತಪದ್ಮನಾಭ ಅಸ್ರಣ್ಣ ಅವರ ದಿವ್ಯೋಪಸ್ಥಿತಿಯಲ್ಲಿ ಜರುಗಿದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ ರಾಜ್ಯಸಭಾ ಸದಸ್ಯ ಕೆ.ನಾರಾಯಣ್ (ಬೆಂಗಳೂರು) ಆಶ್ರಮ ಸ್ಥಾಪನೆಯ ೨೦ನೇ ವರ್ಷದ `ವಿಂಶತಿ ಕಾರ್ಯಕ್ರಮ ಲಾಂಛನ’ ವನ್ನು ಬಿಡುಗಡೆ ಗೊಳಿಸಿದರು.

ಬೆಂಗಳೂರಿನ ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರಮೇಶ್ ರಾಜು ಅವರು ಸುರಭಿ-ಗೋಶಾಲೆ'ಗೆ ಶಿಲಾನ್ಯಾಸ ನಡೆಸಿ, ಶಿಲಾಫಲಕ ಅನಾವರಣ ಗೊಳಿಸಿದರು. ಪುಣೆ ಉದ್ಯಮಿ, ಬಂಟರ ಸಂಘ ಪುಣೆ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲಬೆಟ್ಟು ಬಾಳಿಕೆ ಅವರು ಆಶ್ರಮದಆಶ್ರಯ ಯೋಜನೆ’ಯ ೩೪ನೇ ಮನೆಯ ಕೀಲಿಯನ್ನು ಫಲಾನುಭವಿ ರಾಧಾ ಅವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರುನ ಮಾಜಿ ರಾಜ್ಯಸಭಾ ಸದಸ್ಯ ಡಾ| ಕೆ.ಸಿ ರಾಮಮೂರ್ತಿ ಅವರ ಸಾಮಾಜಿಕ ಮತ್ತು ಇತರ ಕ್ಷೇತ್ರಗಳಲ್ಲಿ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಆಸ್ರಣ್ಣ ಅವರು ಅನುಗ್ರಹಿಸಿ ಕೊಂಡೆವೂರುನಲ್ಲಿ ನಡೆಯುತ್ತಿರುವ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳು ಸಮಾಜವನ್ನು ಒಂದಾಗಿ ಬೆಸೆಯುತ್ತಿರುವುದನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಪೂಜ್ಯಶ್ರೀಗಳು ತಮ್ಮ ಆಶೀರ್ವಚನದಲ್ಲಿ ನಾವು ೩೩ ಕೋಟಿ ದೇವತೆಗಳ ಆವಾಸಸ್ಥಾನವಾದ ಗೋಮಾತೆಯ ಸೇವೆ ಮಾಡುತ್ತ ನಮ್ಮ ಸಂಸ್ಕöÈತಿಯ ರಕ್ಷಣೆ ಮಾಡೋಣ ಎಂದರಲ್ಲದೆ, ಇವತ್ತು ಶಿಲಾನ್ಯಾಸವಾದ ಸುರಭಿ ಗೋಶಾಲೆಗಾಗಿ ಸ್ಥಳ ಖರೀದಿ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಒಂದು ಕೋಟಿ ರೂಪಾಯಿಯಷ್ಟು ಅಂದಾಜಿಸಲಾಗಿದ್ದು ಗೋಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಿ, ಯೋಜನೆಯ ಯಶಸ್ಸಿಗೆ ಪಾಲುದಾರರು ಆಗಬೇಕೆಂದು ಕರೆನೀಡಿದರು.

ಅತಿಥಿü ಅಭ್ಯಾಗತರುಗಳಾಗಿ ಪ್ರೇಮಾನಂದ ಶೆಟ್ಟಿ ಕುಂದಾಪುರ, ಗೋಪಿನಾಥ ಕಾಮತ್ ಸಿದ್ಧಾಪುರ ಹಾಜರಿದ್ದು ಸದಾಶಯ ವ್ಯಕ್ತಪಡಿಸಿದರು. ಶಿವರಾಮ ಪಕಳ, ಶಶಿಧರ ಶೆಟ್ಟಿ ಗ್ರಾಮಚಾವಡಿ, ಸತೀಶ್ ಕುಮಾರ್ ಬೆಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕು| ಗಾಯತ್ರೀ, ಕು| ಶ್ರಾವಣ್ಯ, ಕು| ಭೂಮಿಕಾ ಪ್ರಾರ್ಥನೆಯನ್ನಾಡಿದರು. ಮಾಜಿ ಎಂಎಲ್‌ಸಿ ಮೋನಪ್ಪ ಭಂಡಾರಿ ಸ್ವಾಗತಿಸಿದರು. ದಿನಕರ್ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು. ಡಾ| ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ವಂದನಾರ್ಪಣೆಗೈದರು. ಸಾಯಂಕಾಲ ಕಟೀಲಿನ ಆಸ್ರಣ್ಣರ ಆಚಾರ್ಯತ್ವದಲ್ಲಿ `ಶ್ರೀಚಕ್ರ ಪೂಜೆ’ ನೆರವೇರಿಸಲ್ಪಟ್ಟಿತು.

By suddi9

Leave a Reply

Your email address will not be published. Required fields are marked *