ಕೈಕಂಬ: ಗುರುಪುರ ಕೈಕಂಬ ಪಾಂಪೈ ಚರ್ಚ್ ನಲ್ಲಿ ಸಂಭ್ರಮದ ವಾರ್ಷಿಕ ಜಾತ್ರೆ ನಡೆಯಿತು. ನಿನ್ನೆಯ ಜಾತ್ರೆಯ ಪ್ರಯುಕ್ತ ಚರ್ಚ್ ನಲ್ಲಿ ವಿಶೇಷ ಬಲಿಪೂಜೆ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮಕ್ಕೆ ವಿವಿಧ ಚರ್ಚ್ ಗಳ ಧರ್ಮಗುರುಗಳು ಭಾಗವಹಿಸಿದ್ದರು.
ಎಲ್ಲಾ ಮತಧರ್ಮದ ಬಾಂಧವರು ಸಾಂತ್ಮಾರಿಗೆ ಭಾಗವಹಿಸಿ ಸೌಹಾರ್ದತೆ ಮೆರೆದರು. ವಿವಿಧ ಧರ್ಮಗಳ ಜನರು ದೇವಳದ ಮುಂಭಾಗ ತನ್ನ ಕಷ್ಟಕಾರ್ಪಣ್ಯಗಳ ಪರಿಹಾರಾರ್ಥವಾಗಿ ಮೊಂಬತ್ತಿಗೆ ಬೆಳಗಿ ತನ್ನ ಹರಕೆ ತೀರಿಸಿದರು. ಈ ಹರಕೆಯನ್ನು ಸಲ್ಲಿಸಲು ಹಿಂದೂಗಳು ಭಾಗವಹಿಸುತ್ತಿದ್ದುದು ವಿಶೇಷವಾಗಿತ್ತು.
ಮಂಗಳವಾರ ಸಾಂತ್ಮಾರಿ ಅಂಗವಾಗಿ ಕ್ರೈಸ್ತ ಬಾಂಧವರಿಂದ ಸ್ವಚ್ಛತಾ ಕಾರ್ಯಕ್ರಮಗಳು ಜರುಗಿದವು. ಬಳಿಕ ಕೈಕಂಬದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದ್ದವು. ಸಾಂತ್ಮಾರಿ ಕಾರ್ಯಕ್ರಮದ ಪ್ರಯಕ್ತ ಕೈಕಂಬ ಚರ್ಚ್ ನಿಂದ ಕೈಕಂಬ ಜಂಕ್ಷನ್ ವರೆಗೆ ಧಾರ್ಮಿಕ ಮೆರವಣಿಗೆ ನಡೆದಿತ್ತು.












