ಕೈಕಂಬ: ಬಜ್ಪೆ-ಕೈಕಂಬ ಸುತ್ತಮುತ್ತ ಮೋಡಕವಿದ ವಾತಾವರಣ ಸೃಷ್ಟಿಯಾಗಿದ್ದು, ವ್ಯಾಪಕ ಮಳೆಯಾಗುವ ಲಕ್ಷಣ ಕಂಡುಬಂದಿದೆ. ಇತ್ತ ಗುರುಪುರ ಕೈಕಂಬ ಕೌಡೂರು ಪಂಪ್ಶೆಡ್ಗೆ ಸಿಡಿಲು ಬಡಿದ ಪರಿಣಾಮ ಅದು ಸಂಪೂರ್ಣವಾಗಿ ಸುಟ್ಟು ಭಸ್ಮಗೊಂಡಿದೆ.
ಮಧ್ಯಾಹ್ನದ ವೇಳೆಗೆ ತುಂತುರ ಮಳೆಯಾಗಿದ್ದು ಸಂಜೆಯಂತೆ ಕತ್ತಲು ಆವರಿಸಿತ್ತು. ಈ ನಡುವೆ ಸಿಡಿಲು ಆಗಾಗ ಬಂದೆರಗಿದ ಪರಿಣಾಮ ಜನರು ವ್ಯಾಪಕ ಭಯಗೊಂಡರಲ್ಲದೆ, ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ಜನರು ತಮ್ಮ ಕೆಲಸ ಕಾರ್ಯಗಳನ್ನು ಕ್ಷಣಹೊತ್ತು ನಿಲ್ಲಿಸಿದ ಘಟನೆಯೂ ನಡೆದಿದೆ.



