ಬಂಟ್ವಾಳ: ತಾಲ್ಲೂಕಿನ ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮೆಮಾರ್ ಎಂಬಲ್ಲಿ ಮನೆಯೊಂದರ ಬದಿ ಸಂಪೂರ್ಣ ಕುಸಿದು ಬಿದ್ದಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮೆಮಾರ್ ಎಂಬಲ್ಲಿ ಹಲವು ಮನೆಗಳು ಕುಸಿತದ ಭೀತಿ ಎದುರಿಸುತ್ತಿದೆ.3btl-Ammemar

ಇಲ್ಲಿನ ಪದೆಂಜಾರು ನಿವಾಸಿ ಪರಿಶಿಷ್ಠ ಜಾತಿ ಸಮುದಾಯದ ನಾರಾಯಣ ಮುಕಾರಿ ಎಂಬವರ ಮನೆ ಹಿಂಬದಿ ಸಂಪೂರ್ಣ ಕುಸಿದು ಬಿದ್ದಿದೆ. ಈ ಹಿಂದೆಯೇ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.

ಸ್ಥಳೀಯ ನಿವಾಸಿಗಳಾದ ಹಾಜಿರ ಮತ್ತು ಉಸ್ಮಾನ್ ಎಂಬವರ ಮನೆ ಹಿಂಬದಿ ಕುಸಿತಕ್ಕೀಡಾಗಿದ್ದು, ಇವರು ಮನೆ ತೊರೆದಿದ್ದಾರೆ. ಇನ್ನೊಂದೆಡೆ ಪಕ್ಕದ ಗಂಗು ಮುಕಾರಿ, ಫಝಲ್ ಎಂಬವರ ಮನೆ ಕುಸಿತದ ಭೀತಿ ಎದುರಿಸುತ್ತಿದೆ. ಗೀತಾ ಎಂಬವರ ಮನೆಯ ಆವರಣಗೋಡೆ ಕುಸಿದಿದ್ದು, ಮಳೆ ಹಾನಿಗೀಡಾದ ಮನೆಗಳಿಗೆ ಸೂಕ್ತ ಪರಿಹಾರಧನವೂ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ.

By suddi9

Leave a Reply

Your email address will not be published. Required fields are marked *