ಕಾರ್ಕಳ: ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯು ಇತ್ತೀಚೆಗೆ ಎ.ಜೆ ಹಾಸ್ಪಿಟಲ್-ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಘ ಸಹಯೋಗದೊಂದಿಗೆ ಕಾರ್ಕಳ ಮಿಯಾರು ಇಲ್ಲಿನ ಸೈಂಟ್ ಡೊಮಿನಿಕ್ ಚರ್ಚ್ ನ ಸಭಾ ಭವನದಲ್ಲಿ ಆಯೋಜಿಸಿದ್ದ ಧರ್ಮಾರ್ಥ ಆರೋಗ್ಯ ತಪಾಸಣಾ ಶಿಬಿರಾರ್ಥಿಗಳಿಗೆ ಇಂದಿಲ್ಲಿ ಧರ್ಮಾರ್ಥ ಕನ್ನಡಕ ವಿತರಣೆ ನಡೆಸಲಾಯಿತು.
ಸೈಂಟ್ ಡೊಮಿನಿಕ್ ಚರ್ಚ್ ಮಿಯಾರು ಇದರ ಪ್ರಧಾನ ಗುರು ರೆ| ಫಾ| ಪಾವ್ಲ್ ರೆಗೋ ಉಪಸ್ಥಿತ ಆಯ್ದ ಶಿಬಿರಾರ್ಥಿಗಳಿಗೆ ಕನ್ನಡಕ ವಿತರಣೆ ನಡೆಸಿ ಕನ್ನಡಕಗಳನ್ನು ಉಚಿತವಾಗಿ ಕೊಡಮಾಡಿ ಗ್ರಾಮೀಣ ಪ್ರದೇಶದ ಜನತೆಗೆ ಸ್ಪಂದಿಸುವ ಗುಲಾಬಿ ಕೃಷ್ಣ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಡಾ| ಶಿವರಾಮ ಕೃಷ್ಣ ಭಂಡಾರಿ ಮತ್ತು ಟ್ರಸ್ಟ್ ಗೆ ಅಭಿವಂದಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಮೊಗೇರ ದೈವಸ್ಥಾನ ಸಮಿತಿ ಅಧ್ಯಕ್ಷ ದಿನೇಶ್ ಮೊಗೇರ, ಸದಾನಂದ ಮೊಗೇರ ಮಿಯಾರ್ ಉಪಸ್ಥಿತರಿದ್ದು ಪತ್ರಕರ್ತ ಆರೀಫ್ ಕಲಕಟ್ಟಾ, ನವೀನ್ ಜೆ.ಡಬ್ಲೂ ್ಯ ಸಾಂಕ್ತೀಸ್ (ಐ-ನೆಟ್) ಸಹಕರಿಸಿದರು.
