ಮುಂಬಯಿ : ಕರ್ನಾಟಕದ ರಾಜಧಾನಿ ಬೆಂಗಳೂರು ಅಲ್ಲಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು “ಆರ್ಯಭಟ ಪ್ರಶಸ್ತಿ-೨೦೨೨’ ಅಂತರಾಷ್ಟ್ರೀಯ ಪುರಸ್ಕಾರ ಪ್ರದಾನ ವರ್ಣಮಯ ಸಮಾರಂಭವನ್ನು ಕಳೆದ ಗುರುವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿತ್ತು.

ಮಂಗಳೂರು ಸಹ್ಯಾದ್ರಿ ಇಂಜಿನೀಯರ್ ಕಾಲೇಜ್‌ನ ಪ್ರಾಧ್ಯಾಪಕ, ಸೈಬರ್ ಸೇಫ್ ಇಂಡಿಯಾ ಇದರ ಸಂಪನ್ಮೂಲವ್ಯಕ್ತಿ, ಸೈಬರ್ ಭದ್ರತಾ ತಜ್ಞ, ಡಾ| ಅನಂತ್ ಪ್ರಭು ಗುರುಪುರ ಅವರಿಗೆ ಸೈಬರ್ ಕ್ಷೇತ್ರ ಹಾಗೂ ಸಮಾಜ ಸೇವೆಗೆ ಸಲ್ಲಿಸಿದ ಅನುಪಮ ಸೇವೆಗಾಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿನ ಅತಿಥಿಗಳು ಪ್ರಶಸ್ತಿ ಫಲಕವನ್ನಿತ್ತು ಗೌರವಿಸಿ ಅಭಿನಂದಿಸಿದರು.

ಕರ್ನಾಟಕ ಉಚ್ಛನ್ಯಾಯಲಯದ ವಿಶ್ರಾಂತ ನ್ಯಾಯಮೂರ್ತಿ ಜಸ್ಟೀಸ್ ಅರಳಿ ನಾಗರಾಜ್, ಕರ್ನಾಟಕ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ| ಮಹೇಶ್ ಜೋಶಿ, ಪ್ರಸಿದ್ಧ ಚಲನಚಿತ್ರ ಅಭಿನೇತ್ರಿ ಪದ್ಮಶ್ರೀ ಭಾರತಿ ವಿಷ್ಣುವರ್ಧನ್, ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ| ಹೆಚ್.ಎಲ್.ಎನ್ ರಾವ್ ಉಪಸ್ಥಿತರಿದ್ದು ಡಾ| ಅನಂತ್ ಪ್ರಭು ಸೇರಿದಂತೆ ಅನೇಕ ಸಾಧಕರಿಗೆ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.

ವಿ ಆರ್ ವಿಥ್ ಯು ಮಂಗಳೂರು ತಂಡಡ ಮುಂದಾಳು, ಜನಸ್ನೇಹಿ ಪೋಲಿಸ್ ಅಧಿಕಾರಿ ಗೋಪಾಲ್ ವಿ.ಕುಂದರ್, ತಂಡದ ಕೊಲ್ಲಾಡಿ ಬಾಲಕೃಷ್ಣ ರೈ, ಕೀರ್ತನ್ ದೇವಾಡಿಗ, ರಾಜೇಶ್ ಕದ್ರಿ, ಶ್ರೀಜೆ ಬಂಗೇರ, ಹರೀಶ್ ಪೈ, ಸುಧಾಕರ್ ಕಾಮತ್, ಶ್ಯಾಮ್ ಪ್ರಸಾದ್, ವಿಶ್ವಾಸ್ ಗುರುಪುರ ಸೇರಿದಂತೆ ಅನೇಕ ಗಣ್ಯರು ಮತ್ತಿತರರು ಪ್ರಶಸ್ತಿ ಪುರಸ್ಕೃತ ಡಾ| ಅನಂತ್ ಪ್ರಭು ಅವರಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತಕೋರಿ ಅಭಿನಂದಿಸಿದರು.

ಸುಮಾರು ಅರ್ಧ ಲಕ್ಷ ಮೌಲ್ಯದ ಇನ್ವರ್ಟರ್ ಕೊಡಮಾಡಿದ್ದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಹಿರಿಯ ನಾಗರಿಕರೊಡನೆ ಉಟೋಪಚಾರಗೈದು ವೃದ್ದ ಜೀವಗಳಿಗೆೆ ನಾವು ನಿಮ್ಮೊಂದಿಗಿದ್ದೇವೆ ಎಂದು ಶಕ್ತಿ ತುಂಬಿದರು.
